ಮೂರೂವರೆ ವರ್ಷ ನಮ್ಮದೇ ಸರ್ಕಾರ ಇರತ್ತೆ: ಸಂಡೂರಿನ ಅಭಿವೃದ್ಧಿ ಜೋರಾಗತ್ತೆ. ಕಾಂಗ್ರೆಸ್ ಗೆಲ್ಲಿಸಿ ಕಳುಹಿಸಿ: ಸುಳ್ಳು ಬಿಜೆಪಿಯ ಮನೆ ದೇವರು: ಸಿ.ಎಂ.ಸಿದ್ದರಾಮಯ್ಯ
ಸಂಡೂರು: ಅನ್ನಪೂರ್ಣಮ್ಮ ನನ್ನ ಆತ್ಮೀಯ ಸ್ನೇಹಿತನ ಮಗಳು. ಇವರನ್ನು ಗೆಲ್ಲಿಸಿ ಕಳುಹಿಸಿ
*ಮೂರೂವರೆ ವರ್ಷ ನಮ್ಮದೇ ಸರ್ಕಾರ ಇರತ್ತೆ: ಸಂಡೂರಿನ ಅಭಿವೃದ್ಧಿ ಜೋರಾಗತ್ತೆ. ಕಾಂಗ್ರೆಸ್ ಗೆಲ್ಲಿಸಿ ಕಳುಹಿಸಿ:
ಸಂಡೂರು ವಿಧಾನಸಭಾ ಕ್ಷೇತ್ರದ ಬೊಮ್ಮಘಟ್ಟದಲ್ಲಿ ನಡೆದ ಬೃಹತ್ ಜನ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಮ್ಮ ಅವರ ಗೆಲುವಿಗೆ ಪ್ರಚಾರ ನಡೆಸಿ ಮಾತನಾಡಿದರು.
ಈ.ತುಕಾರಾಮ್ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಕಾತರಿಸುತ್ತಾ ಕೆಲಸ ಮಾಡುವ ಶಾಸಕರಾಗಿದ್ದರು, ಈಗ ಸಂಸದರಾಗಿದ್ದಾರೆ. ಸಂಡೂರಿನಲ್ಲಿ ಈಗ ಆಗಿರುವ ಎಲ್ಲಾ ಅಭಿವೃದ್ಧಿಗಳೂ ಈ.ತುಕಾರಾಮ್ ಮತ್ತು ಸಂತೋಷ್ ಲಾಡ್ ಅವರ ಅವಧಿಯಲ್ಲಿ ಆಗಿರುವಂಥವು.
ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದ ಅವಧಿಯಿಂದಲೂ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿದೆ. ಬಿಜೆಪಿ ಸ್ವಾತಂತ್ರ್ಯ ಹೋರಾಟದಲ್ಲೂ ಜನರ ಪರವಾಗಿ ಇರಲಿಲ್ಲ. ಈಗಲೂ ಇಲ್ಲ.
ಪ್ರಧಾನಿ ನರೇಂದ್ರ ಮೋದಿಯವರು “ನಾ ಖಾವೋಂಗಾ-ನಾ ಖಾನೆ ದೂಂಗಾ” ಎಂದು ಭಾಷಣ ಮಾಡುತ್ತಾರೆ. ಆದರೆ ಜನಾರ್ಧನರೆಡ್ಡಿಯನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಜನಾರ್ದನ ರೆಡ್ಡಿಯನ್ನು ನ್ಯಾಯಲಯವೇ ಅಪರಾಧಿ ಎಂದು ಘೋಷಿಸಿ ಜೈಲಿಗೆ ಹಾಕಿತ್ತು. ಬಿಜೆಪಿಗಾಗಲಿ, ಮೋದಿಗಾಗಲಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಷ್ಟೂ ದಿನ ಸಂಡೂರಿಗೆ ಒಂದೇ ಒಂದು ಮನೆ ಕೊಡುವ ಯೋಗ್ಯತೆ ಇರಲಿಲ್ಲ. ಆಪರೇಷನ್ ಕಮಲದ ಮೂಲಕ ಜನ ಗೆಲ್ಲಿಸಿದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಲೂಟಿ ಮಾಡಿಕೊಂಡು ಹೋದರು. ಅದಕ್ಕೇ ಆಪರೇಷನ್ ಕಮಲದ ಸರ್ಕಾರವನ್ನು ಜನ ಸೋಲಿಸಿ ನಮ್ಮ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು.
ನಾವು ಅಧಿಕಾರಕ್ಕೆ ಬಂದ 8 ತಿಂಗಳಲ್ಲೇ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ. ಒಂದು ಕೋಟಿ ಇಪ್ಪತ್ತು ಲಕ್ಷ ಕುಟುಂಬಗಳ ಯಜಮಾನಿ ಮಹಿಳೆಯರಿಗೆ ಪ್ರತೀ ತಿಂಗಳು 2000 ರೂಪಾಯಿ ಕೊಡ್ತಾ ಇರೋದು ನಮ್ಮ ಸರ್ಕಾರ. 1 ಕೋಟಿ 61 ಲಕ್ಷ ಕುಟುಂಬಗಳಿಗೆ ಉಚಿತ ಕರೆಂಟ್ ಕೊಡ್ತಾ ಇರೋದು ನಾವು. ಐದು ಕೆಜಿ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಯ ಹಣವನ್ನೂ ಕೊಡ್ತಾ ಇರೋದು ನಾವು. ಹೀಗೆ ಐದಕ್ಕೆ ಐದೂ ಗ್ಯಾರಂಟಿಗಳ ಮೂಲಕ ಸಂಡೂರಿನ ಜನರಿಗೆ, ರಾಜ್ಯದ ಜನರಿಗೆ ಆರ್ಥಿಕ ಶಕ್ತಿ ಕೊಡ್ತಾ ಇರೋದು ನಾವು. ನಮ್ಮ ಕಾಂಗ್ರೆಸ್ ಸರ್ಕಾರ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯಗಳಲ್ಲೂ BJP ಏಕೆ ಜಾರಿ ಮಾಡಿಲ್ಲ ಎನ್ನುವುದನ್ನು ಜನರಿಗೆ ಉತ್ತರಿಸಬೇಕು ಎಂದರು.
ಸಂಡೂರಿನ ಅಭಿವೃದ್ಧಿಗೆ ಈ.ತುಕಾರಾಮ್ ಮತ್ತು ಇವರ ಧರ್ಮಪತ್ನಿ ಅನ್ನಪೂರ್ಣಮ್ಮ ಅವರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಅನ್ನಪೂರ್ಣಮ್ಮ ಗೆದ್ದರೆ ಸಂಡೂರಿನ ಅಭಿವೃದ್ಧಿ ಕೆಲಸಗಳು ಸರಾಗವಾಗಿ, ವೇಗವಾಗಿ ಮುಂದುವರೆಯುತ್ತವೆ ಎಂದರು.
ಅನ್ನಪೂರ್ಣಮ್ಮ ನನ್ನ ಆತ್ಮೀಯ ಸ್ನೇಹಿತನ ಮಗಳು. ಇವರನ್ನು ಗೆಲ್ಲಿಸಿ ಕಳುಹಿಸಿ ಸಂಡೂರಿನ ಜನರಿಗೆ ತುಂಬಾ ಅನುಕೂಲಗಳಾಗುತ್ತವೆ ಎಂದರು.
BJP ಯವರಿಗೆ ಸಂಡೂರಿನ ಗುಡ್ಡಗಳು, ಗಣಿಗಳ ಮೇಲೆ ಮಾತ್ರ ಪ್ರೀತಿ. BJP ಯವರಿಗೆ ಸಂಡೂರಿನ ಜನರ ಬಗ್ಗೆ, ಸಂಡೂರಿನ ಬಡವರ ಮೇಲೆ ಖಂಡಿತಾ ಪ್ರೀತಿ ಇಲ್ಲ.
ನಾನು ಸುಡುಗಾಡಿಗೆ ಹೋಗುವವರೆಗೂ ಸಂಡೂರಿನ ಜನರ ಋಣದಲ್ಲಿ ಇರ್ತೀನಿ. ನನ್ನಪ್ಪ ಇಲ್ಲೇ ಸತ್ತ. ನನ್ನ ದೊಡ್ಡಪ್ಪ ಇಲ್ಲೇ ಸತ್ತ. ನಾನು ಜೀವ ಇರುವವರೆಗೂ ಇಲ್ಲೇ ಈರ್ತೀನಿ. ಇಲ್ಲೇ ಸಾಯ್ತೀನಿ.
-ಸಚಿವ ಸಂತೋಷ್ ಲಾಡ್
ವಾದಾ ದಿಯಾ- ಪೂರಾ ಕಿಯಾ: ಸಿ.ಎಂ.ಸಿದ್ದರಾಮಯ್ಯ*
*ಮಹಾರಾಷ್ಟ್ರ ಬಿಜೆಪಿಯ ಸುಳ್ಳು ಜಾಹಿರಾತಿಗೆ ಅವರದೇ ಶೈಲಿಯಲ್ಲಿ ಸಿ.ಎಂ.ಸಿದ್ದರಾಮಯ್ಯ ಗುದ್ದು*
*BJP ಮಹಾರಾಷ್ಟ್ರದ ಜನರನ್ನು ಸರಣಿ ಸುಳ್ಳುಗಳ ಮೂಲಕ ವಂಚಿಸುತ್ತಿದೆ: ಸಿ.ಎಂ*
ಸಂಡೂರು ನ 7: ವಾದಾ ದಿಯಾ: ಪೂರಾ ಕಿಯಾ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಬಿಜೆಪಿಯ ಸುಳ್ಳು ಜಾಹಿರಾತಿಗೆ ಕಪಾಳಮೋಕ್ಷ ಮಾಡಿದರು.
ಸಂಡೂರು ಚುನಾವಣಾ ಪ್ರಚಾರದ ವೇದಿಕೆಯಲ್ಲೇ ಈ ಹೇಳಿಕೆ ನೀಡಿದರು.
ಮಹಾರಾಷ್ಟ್ರದ ಬಿಜೆಪಿ “ಕರ್ನಾಟಕ ಸರ್ಕಾರ ವಾದಾ ಕಿಯಾ: ಧೋಖಾ ದಿಯಾ” ಎಂದು ಸುಳ್ಳು ಜಾಹಿರಾತು ನೀಡಿದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿತ್ತು. ಭರವಸೆ ಈಡೇರಿಸದೇ, ಯೋಜನೆಯನ್ನೇ ಇನ್ನೂ ಆರಂಭಿಸದೆ ವಂಚಿಸಿದೆ ಎನ್ನುವ ಅರ್ಥದ ಪರಮ ಸುಳ್ಳಿನ ಜಾಹಿರಾತುಗಳನ್ನು ಪುಟಗಟ್ಟಲೆ ನೀಡಿದೆ.
ಈ ಸುಳ್ಳಿನ ಜಾಹಿರಾತನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ ಅವರು ಅವರದೇ ಶೈಲಿಯಲ್ಲಿ ಉತ್ತರಿಸಿ, “ವಾದಾ ದಿಯಾ ಪೂರಾ ಕಿಯಾ” ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು.
“ಸುಳ್ಳೇ ಬಿಜೆಪಿಯ ಮನೆ ದೇವರು: ಸಿಎಂ”
ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ರಾಜ್ಯದಲ್ಲಿ ಶಕ್ತಿ ಯೋಜನೆ ಸೇರಿದಂತೆ ಐದಕ್ಕೆ ಐದೂ ಗ್ಯಾರಂಟಿಗಳು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಗೃಹಲಕ್ಷ್ಮಿಯ ಮುಂದಿನ ಕಂತಿನ ಹಣ ಒಂದೆರಡು ದಿನಗಳಲ್ಲೇ ಬಿಡುಗಡೆ ಕೂಡ ಆಗುತ್ತದೆ. ಆದರೆ ಬಿಜೆಪಿಯವರು ಸುಳ್ಳುಗಳನ್ನು ಹರಡಿಸುತ್ತಾ, ಸುಳ್ಳುಗಳನ್ನು ಹರಡುವುದಕ್ಕೇ ಕೋಟಿ ಕೋಟಿ ಖರ್ಚು ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
*ಮೋದಿ ಹೇಳಿದ್ದೇನು ? ಮಾಡಿದ್ದೇನು?*
ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಕೊಡ್ತೀವಿ ಅಂತ ಹೇಳಿದ್ರಲ್ಲಾ ಮೋದಿಯವರೇ ಕೊಟ್ರೇನ್ರೀ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ, ಉದ್ಯೋಗ ಸೃಷ್ಟಿ ಮಾಡಿದ್ರಾ ? ಎಲ್ರೀ ಸ್ವಾಮಿ ನಿಮ್ಮ ಅಚ್ಚೆ ದಿನ್? ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ ಮಾಡಿದ್ರಾ ? ಮೋದಿ ಪ್ರಧಾನಿ ಆಗುವ ಮೊದಲು ದೇಶದ ಸಾಲ ಇದ್ದದ್ದು 54 ಲಕ್ಷ ಕೋಟಿ ಮಾತ್ರ ಇತ್ತು. ಈಗ ನಿಮ್ಮ ಅವಧಿಯಲ್ಲಿ ದೇಶದ ಸಾಲವನ್ನು 185 ಲಕ್ಷ ಕೋಟಿಗೆ ಏರಿಸಿದ್ದೀರಿ. ಇದೇನಾ ಸ್ವಾಮಿ ನಿಮ್ಮ ಅಚ್ಚೆ ದಿನ್ ಎಂದು ವ್ಯಂಗ್ಯವಾಡಿದರು.
ಸಂಡೂರು ವಿಧಾನಸಭಾ ಕ್ಷೇತ್ರದ ಚೋರನೂರು ಗ್ರಾಮದಲ್ಲಿ ನಡೆದ ಬೃಹತ್ ಜನ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ಮುಖ್ಯಾಂಶಗಳು…
*ಕೊಟ್ಟ ಮಾತಿನಂತೆ ನಡೆದುಕೊಂಡ, ನುಡಿದಂತೆ ನಡೆದ ಕಾಂಗ್ರೆಸ್ ಮತ್ತು ಕೊಟ್ಟ ಮಾತಿಗೆ ತಪ್ಪಿದ ಬಿಜೆಪಿ ನಡುವೆ ಸಂಡೂರಲ್ಲಿ ಚುನಾವಣೆ ನಡೆಯುತ್ತಿದೆ. ಯಾರಿಗೆ ಮತ ಕೊಟ್ಟರೆ ನಿಮ್ಮ ಮತಕ್ಕೆ ಬೆಲೆ, ಗೌರವ ಬರುತ್ತದೆ ಎಂದು ಯೋಚಿಸಿ ಮತದಾನ ಮಾಡಿ*
*ಸಂಡೂರಿನಲ್ಲಿ ಅನ್ನಪೂರ್ಣ ಈ.ತುಕಾರಾಮ್ ಅವರು ಗೆದ್ದರೆ ನಾನೇ ಗೆದ್ದ ಹಾಗೆ: ಸಿ.ಎಂ.ಸಿದ್ದರಾಮಯ್ಯ*
*ನಮ್ಮ ಸರ್ಕಾರ ಇನ್ನೂ ಮೂರೂವರೆ ವರ್ಷ ಅಧಿಕಾರದಲ್ಲಿದ್ದು ಮುಂದಿನ ಚುನಾವಣೆಯಲ್ಲೂ ನಮ್ಮ ಕಾಂಗ್ರೆಸ್ ಪಕ್ಷವೇ ಗೆದ್ದು ಅಧಿಕಾರಕ್ಕೆ ಬರಲಿದೆ. ಆದ್ದರಿಂದ ಅನ್ನಪೂರ್ಣಮ್ಮ ಅವರನ್ನು ಅತ್ಯಂತ ಬಹುಮತದಿಂದ ಗೆಲ್ಲಿಸಿ ಸಂಡೂರಿನ ಅಭಿವೃದ್ಧಿ ಪರ್ವ ಮುಂದುವರೆಯಲು ಸಹಕರಿಸಿ*
*ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸದೆ ಸುಮ್ಮನಾಗಿದ್ದ ಬಿಜೆಪಿ ಪರಿವಾರದ ಕೊಡುಗೆ ಈ ದೇಶಕ್ಕೆ ಸೊನ್ನೆ*
*ಇಂದಿರಾಗಾಂಧಿಯವರು 20 ಅಂಶಗಳ ಕಾರ್ಯಕ್ರಮ ಮೂಲಕ ದೇಶಕ್ಕೆ ಆಹಾರ ಭದ್ರತೆ ಒದಗಿಸಿ, ಬಡತನ ನಿರ್ಮೂಲನೆಗೆ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದರು. ಬಿಜೆಪಿಯವರ ಕೊಡುಗೆ ಏನು?*
*ದೇವರಾಜ ಅರಸು ಅವರ ಬಳಿಕ ಐದು ವರ್ಷ ಅವಧಿಗೆ ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸಿದವನು ನಾನು. ಮತ್ತೆ ಮುಖ್ಯಮಂತ್ರಿ ಆದೆ. ರಾಜ್ಯದ ಜನರಿಗೆ ನಾವು, ನಮ್ಮ ಸರ್ಕಾರ ಕೊಟ್ಟ ಹತ್ತು ಹಲವು ಭಾಗ್ಯಗಳು ಮತ್ತು ನುಡಿದಂತೆ ನಡೆದ ನಮ್ಮ ಜನಪರವಾದ ಬದ್ದತೆ ಇದಕ್ಕೆ ಕಾರಣ.
*2023 ರಲ್ಲಿ ನಾವು ಐದು ಗ್ಯಾರಂಟಿಗಳನ್ನು ಘೋಷಿಸಿ, ಸರ್ಕಾರ ಬಂದ 8 ತಿಂಗಳಲ್ಲೇ ಐದಕ್ಕೆ ಐದೂ ಜಾರಿ ಮಾಡಿದ್ದೇವೆ*
*ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ನಿಮಗೆ, ರಾಜ್ಯದ ಜನರಿಗೆ ಬಿಜೆಪಿ ಏನಾದ್ರೂ ಕೊಟ್ಟಿದೆಯಾ? ಕೊಟ್ಟಿದ್ರೆ ನಿಮಗೆ ನೆನಪಿರ್ತಾ ಇತ್ತು ತಾನೆ?*
*ಬಿಜೆಪಿ 2018 ರಲ್ಲಿ ಕೊಟ್ಟಿದ್ದ ಭರವಸೆಗಳಲ್ಲಿ ಶೇ10 ರಷ್ಟನ್ನೂ ಈಡೇರಿಸಲಿಲ್ಲ.*
*ಚುನಾವಣೆ ವೇಳೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದರು. ಆದರೆ, ಗೆದ್ದ ಬಳಿಕ ಸಾಲ ಮನ್ನಾ ಮಾಡಿ ಅಂದ್ರೆ, “ಸಾಲ ಮನ್ನಾ ಮಾಡೋಕೆ ನಾವೇನು ದುಡ್ಡು ಪ್ರಿಂಟ್ ಹಾಕೋ ಮಿಷನ್ ಇದೆಯಾ? ಎಂದು ಯಡಿಯೂರಪ್ಪ ಪ್ರಶ್ನಿಸಿದರು.
*ಸಾಲ ಮನ್ನಾ ಮಾಡದ ಕೇಂದ್ರದ ಬಿಜೆಪಿ ಸರ್ಕಾರದ ಪ್ರಧಾನಿ ಮೋದಿಯವರು ಅತ್ಯಂತ ಶ್ರೀಮಂತರಾದ ಕಾರ್ಪೋರೇಟ್ ಕಂಪನಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಇದೇ ಹಣದಲ್ಲಿ ರೈತರ ಸಾಲ ಮನ್ನಾ ಮಾಡಬಹುದಿತ್ತಲ್ಲವಾ ?
*ಅಚ್ಛೇ ದಿನ್ ಆಯೆಗಾ ಅಂದ್ರಲ್ಲಾ ಮೋದಿ ಬಂತಾ ಅಚ್ಛೇ ದಿನ್. ಯಾರ ಮನೆ ಬಾಗಿಲಿಗಾದರೂ ಅಚ್ಛೆ ದಿನ್ ಬಂದಿದೆಯಾ? ಯಾರಿಗಾದರೂ ಕಾಣಿಸಿದೆಯಾ?
*ಮೋದಿ ಟೀಕಿಸಿದ್ದಕ್ಕೆ ನನ್ನ ಮೇಲೆ ಸುಳ್ಳು ಕೇಸು*
ನಾನು ನಿರಂತರವಾಗಿ ಮೋದಿ, ಅಮಿತ್ ಶಾ ಅವರ ನೀತಿಗಳನ್ನು, ಸುಳ್ಳುಗಳನ್ನು, ಅವರು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯಗಳನ್ನು ಪ್ರಶ್ನಿಸಿ ಟೀಕಿಸಿದ್ದರಿಂದ ನನ್ನನ್ನೇ ಮುಗಿಸಲು ಮುಂದಾಗಿದ್ದಾರೆ. ನನ್ನ ಮೇಲೆ ಸುಳ್ಳು ಕೇಸು ಹಾಕಿಸಿ ಷಡ್ಯಂತ್ರ ನಡೆಸುತ್ತಿದ್ದಾರೆ*
*ನಿಮ್ಮಗಳ ಆಶೀರ್ವಾದ, ಬೆಂಬಲ ನನ್ನ ಮೇಲೆ ಇರುವವರೆಗೂ ಯಾವ ಷಡ್ಯಂತ್ರಗಳಿಗೂ ನಾನು ಜಗ್ಗಲ್ಲ, ಬಗ್ಗಲ್ಲ.
ನರೇಂದ್ರ ಮೋದಿ- ಅಮಿತ್ ಶಾ ಜೋಡಿ ಇಡಿ, ಐಟಿ, ಸಿಬಿಐ ಮೂಲಕ ತಮ್ಮಟೀಕಾಕಾರರನ್ನು ಮುಗಿಸಲು ಹೊರಟಿದ್ದಾರೆ: ಸಿ.ಎಂ.ಸಿದ್ದರಾಮಯ್ಯ*

*ಇಡಿ, ಐಟಿ, ಸಿಬಿಐ ಮೂಲಕ ಪ್ರಧಾನಿ ತಮ್ಮಟೀಕಾಕಾರರನ್ನು ಮುಗಿಸಲು ಹೊರಟಿದ್ದಾರೆ.*
*ನಿಮ್ಮಗಳ ಆಶೀರ್ವಾದ, ಬೆಂಬಲ ನನ್ನ ಮೇಲೆ ಇರುವವರೆಗೂ ಯಾವ ಷಡ್ಯಂತ್ರಗಳಿಗೂ ನಾನು ಜಗ್ಗಲ್ಲ, ಬಗ್ಗಲ್ಲ.