ಬೆಳಗಾವಿ : ಜನವರಿ 26, 2025 ರಿಂದ ಜನವರಿ 26, 2026 ರವರೆಗೆ ನಾವು ‘ಸಂವಿಧಾನ ಉಳಿಸಿ ರಾಷ್ಟ್ರೀಯ ಯಾತ್ರೆ’ಯನ್ನು ಪ್ರಾರಂಭಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಸಿಡಬ್ಲ್ಯೂಸಿ ಸಭೆ ಬಳಿಕ ಬೆಳಗಾವಿಯಲ್ಲಿ ಮಾತನಾಡಿ, ಈ ಯಾತ್ರೆ ಪ್ರತಿ ರಾಜ್ಯದಲ್ಲೂ ನಡೆಯಲಿದ್ದು, ಎಲ್ಲ ಸಮಸ್ಯೆಗಳನ್ನು ಒಳಗೊಳ್ಳಲಿದೆ. ಭಾರತ್ ಜೋಡೋ ಯಾತ್ರೆಯು ಕಾಂಗ್ರೆಸ್ಗೆ ‘ಸಂಜೀವನಿ’ ನೀಡಿತು. ಇದೀಗ ಒಂದು ವರ್ಷ ಸಂವಿಧಾನ ಉಳಿಸಿ ರಾಷ್ಟ್ರೀಯ ಪಾದಯಾತ್ರೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.