ಶಾಲೆ ಹತ್ತಿರ ತಂಬಾಕು ಮಾರುತ್ತಿದ್ದ ಅಂಗಡಿ ಮೇಲೆ ದಾಳಿ..!
ಇಂದು ಬಾಗೇವಾಡಿ ಪೊಲೀಸರಿಂದ, ನಾಳೆಯಿಂದ ತಾಲೂಕಿನಾದ್ಯಂತ ಶುರು..?
ಬೆಳಗಾವಿ : ತಾಲೂಕಿನ ಕೆ ಕೆ ಕೊಪ್ಪ ಗ್ರಾಮದದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಹತ್ತಿರ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರುತ್ತಿದ್ದ ಅಂಗಡಿ ಮೇಲೆ ಡಿಸಿಪಿ ಪಿ ವಿ ಸ್ನೇಹಾ ಅವರ ಮಾರ್ಗದರ್ಶನದಂತೆ 2003 COTPA ಕಾಯ್ದೆಯಡಿ ಹಿರೇಬಾಗೇವಾಡಿ ಪಿಎಸ್ಐ ಅವಿನಾಶ ಯರಗೊಪ್ಪ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ತಂಬಾಕು ಪದಾರ್ಥದ ಗುಟಕಾ ಪ್ಯಾಕೆಟ್ಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲಿಕನ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ತಾಲೂಕಿನಾದ್ಯಂತ ಶಾಲಾ ಕಾಲೇಜಿನ ಸಮೀಪವಿರುವ ಎಲ್ಲ ಪಾನಶಾಪ್ ಹಾಗೂ ಕಿರಾಣಿ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವರ ವಿರುದ್ಧ ಪೊಲೀಸರು ಸಂಬಂಧಪಟ್ಟ ಇಲಾಖೆಯವರೊಂದಿಗೆ ದಾಳಿ ನಡೆಸಲಿರುವುದಾಗಿ ತಿಳಿದು ಬಂದಿದೆ.