ಬೆಳಗಾವಿ :
ಯರಗಟ್ಟಿ ತಾಲೂಕಿನ ಹಲಕಿ ಗ್ರಾಮದ ಬಳಿ ಗೃಹಿಣಿ ಜೊತೆ ಅನೈತಿಕ ಸಂಬಂಧ ಹೊಂದಿದ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ರವಿವಾರ ನಡೆದಿದೆ.
ವನ್ನೂರ ಗ್ರಾಮದ ರಮೇಶ ಗುಂಜಗಿ (24) ಕೊಲೆಯಾದ ಯುವಕ. ಕಳೆದ ಎರಡು ತಿಂಗಳಿನಿಂದ ನೆರೆಮನೆಯ ವಿವಾಹಿತೆಯೊಂದಿಗೆ ಆತ ಅಕ್ರಮ ಸಂಬಂಧ ಹೊಂದಿದ್ದ. ಮಹಿಳೆಯ ಪತಿ ಯಲ್ಲಪ್ಪ ಕಸೊಳ್ಳಿಗೆ ವಿಷಯ ಗೊತ್ತಾಗಿದ್ದು ರಮೇಶನನ್ನು ಕೊಲೆ ಮಾಡಿದ್ದಾನೆ. ರಮೇಶನ ತಲೆಯ ಮೇಲೆ ಕಲ್ಲು ಎತ್ತಿಹಾಕಿರುವ ಯಲ್ಲಪ್ಪ ಮತ್ತು ಆತನ ಗೆಳೆಯರು ಈ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಅನೈತಿಕ ಸಂಬಂಧಕ್ಕೆ ಸಂಬಂಧಪಟ್ಟಂತೆ ತಿಂಗಳ ಹಿಂದೆ ರಾಜಿ ಪಂಚಾಯಿತಿ ಸಹ ನಡೆದಿದ್ದು ಯಲ್ಲಪ್ಪನಿಗೆ ರಮೇಶ್ 2 ಲಕ್ಷ ದಂಡ ಕೊಟ್ಟಿದ್ದ.
ಮಹಿಳೆ ತನ್ನ ಗಂಡನ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ ಎಂದು ರಮೇಶನ ಕುಟುಂಬಸ್ಥರು ಆರೋಪಿಸಿದ್ದಾರೆ. ಯಲ್ಲಪ್ಪ, ಅವನ ಹೆಂಡತಿ ಸಾವಕ್ಕ ಮತ್ತು ಅವನ ಸ್ನೇಹಿತರು ಸೇರಿ ಕೊಲೆ
ಮಾಡಿರುವುದಾಗಿ ರಮೇಶ್ ಸಂಬಂಧಿಕರು ಮುರುಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.