ಎಳೆಯ ಅಮೆರಿಕ ಕ್ರಿಕೆಟ್ ತಂಡ ಇದೀಗ ಪಾಕಿಸ್ತಾನವನ್ನು ಸದೆ ಬಡಿದು ಅಚ್ಚರಿ ಮೂಡಿಸಿದೆ. ಪಾಕಿಸ್ತಾನ ವಿರುದ್ಧ ಯುಎಇ ಗೆಲುವಿನ ಹಿಂದೆ ತಂಡದಲ್ಲಿರುವ ಭಾರತೀಯ ಮೂಲದ ಆಟಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ನಾಯಕ ಮೋನಾಕ್ ಪಟೇಲ್ ಬ್ಯಾಟಿಂಗ್ನಲ್ಲಿ 50(38) ರನ್ ಗಳಿಸಿದರೆ, ಸೌರಭ್ ನೇತ್ರವಾಲ್ಕರ್ ಬೌಲಿಂಗ್ನಲ್ಲಿ 2 ವಿಕೆಟ್ ಪಡೆದು ಮಿಂಚಿದರು. ಸೂಪರ್ ಓವರ್ನಲ್ಲಿಯೂ ಪಾಕಿಸ್ತಾನದ ಬ್ಯಾಟರ್ಗಳು ನೇತ್ರವಾಲ್ಕರ್ ಎದುರು ನಿಲ್ಲಲು ಸಾಧ್ಯವಾಗಲಿಲ್ಲ. ಮುಂಬೈನಲ್ಲಿ ಜನಿಸಿದ ಸೌರಭ್ ಈ ಹಿಂದೆ ರಣಜಿ ಟ್ರೋಫಿ (2013-14) ಮತ್ತು ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು.
ಡಲ್ಲಾಸ್: ಈಗಷ್ಟೇ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿರುವ ಅಮೆರಿಕ ಹುಬ್ಬೇರಿಸುವ ಸಾಧನೆ ಮಾಡಿದೆ.
ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಟಿ20 ವಿಶ್ವ ಕಪ್ನ ತನ್ನ ಮೊದಲ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ್ದು, ಕ್ರಿಕೆಟ್ ಕ್ಷೇತ್ರದಲ್ಲಿ ಕಣ್ಣರಳಿಸುತ್ತಿರುವ ಅಮೆರಿಕ ವಿರುದ್ಧವೇ ಸೋತಿದೆ. ಎ ಗುಂಪಿನ ಈ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿನ ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಮೊರೆ ಹೋಗಲಾಯಿತು. ಅಂತಿಮವಾಗಿ ಪಾಕಿಸ್ತಾನವನ್ನು ಕಟ್ಟಿ ಹಾಕಿದ ಅಮೆರಿಕದ ತಂಡ ಜಯದ ಕೇಕೆ ಹಾಕಿತು. ಇದು ಅಮೆರಿಕ ತಂಡಕ್ಕೆ ಹಾಲಿ ವಿಶ್ವ ಕಪ್ನಲ್ಲಿ ಸತತ ಎರಡನೇ ವಿಜಯವಾಗಿದ್ದು ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಡಲ್ಲಾಸ್ನ ಗ್ರ್ಯಾಂಡ್ ಪ್ರೈರಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಅಮೆರಿಕ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಬ್ಯಾಟಿಂಗ್ ವೈಫಲ್ಯ ಎದುರಿಸಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಅಮೆರಿಕದ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 3 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿತು. ಕೊನೇ ಓವರ್ನಲ್ಲಿ ಅಮೆರಿಕಕ್ಕೆ 15 ರನ್ ಗೆಲುವಿಗೆ ಬೇಕಾಗಿತ್ತು. ಆದರೆ, 14 ರನ್ ಬಾರಿಸಿದ ಕಾರಣ ಸೂಪರ್ ಓವರ್ ಅನಿವಾರ್ಯವಾಯಿತು.
ಅನುಭವಿ ಬೌಲರ್ ಮೊಹಮ್ಮದ್ ಅಮೀರ್ ದಾಳಿಯನ್ನು ಎದುರಿಸಿದ ಅಮೆರಿಕ ತಂಡ ಒಂದು ಓವರ್ನಲ್ಲಿ 19 ರನ್ ಬಾರಿಸಿತು. ಇದನ್ನು ಬೆನ್ನಟ್ಟಲು ಹೊರಟ ಪಾಕಿಸ್ತಾನ 1 ವಿಕೆಟ್ ನಷ್ಟ ಮಾಡಿಕೊಂಡು ಕೇವಲ 13 ರನ್ ಬಾರಿಸಿ ಐದು ರನ್ಗಳ ಪರಾಜಯಕ್ಕೆ ಗುರಿಯಾಯಿತು.
ಪಾಕಿಸ್ತಾನ ತಂಡಕ್ಕೆ ಇದು ಹಾಲಿ ವಿಶ್ವ ಕಪ್ನಲ್ಲಿ ಮೊದಲ ಪಂದ್ಯವಾಗಿತ್ತು. ಅದರಲ್ಲೇ ಸೋಲುವ ಮೂಲಕ ಹೀನಾಯ ಅರಂಭ ಮಾಡಿತು. ಅದೂ ಅಮೆರಿಕದ ವಿರುದ್ಧ ಸೋಲುವ ಮೂಲಕ ಇದ್ದ ಮರ್ಯಾದೆಯನ್ನೂ ಕಳೆದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಪವರ್ ಪ್ಲೇನಲ್ಲಿ 30 ರನ್ ಗಳಿಸಿ ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್ ಮತ್ತು ಉಸ್ಮಾನ್ ಖಾನ್ ಅವರ ವಿಕೆಟ್ ಗಳನ್ನು ಕಳೆದುಕೊಂಡಿತು. ಮತ್ತೊಂದೆಡೆ ನಾಯಕ ಬಾಬರ್ ಅಝಾಮ್ ಒತ್ತಡದಲ್ಲಿ ಉತ್ತಮ ಆರಂಭ ನೀಡಿದರು. ಬಾಬರ್ ಮತ್ತು ಶದಾಬ್ ಖಾನ್ ನಾಲ್ಕನೇ ವಿಕೆಟ್ಗೆ 8 ಓವರ್ಗಳಲ್ಲಿ 72 ರನ್ಗಳ ಜೊತೆಯಾಟ ನೀಡಿದರು.
ಶದಾಬ್ 25 ಎಸೆತಗಳಲ್ಲಿ 4 ಮತ್ತು 3 ಸಿಕ್ಸರ್ಗಳೊಂದಿಗೆ 40 ರನ್ ಗಳಿಸಿದರು. ಬಾಬರ್ 23 ಎಸೆತಗಳಲ್ಲಿ 44 ರನ್ ಸಿಡಿಸಿ ಔಟಾದರು. ನಂತರ ಫಾರ್ಮ್ನಲ್ಲಿ ಇಲ್ಲದ ಅಜಂ ಖಾನ್ ಗೋಲ್ಡನ್ ಡಕ್ಗೆ ಕಳುಹಿಸಿದರು.
ಅಮೆರಿಕ ಪರ ಮಿಂಚಿದ ಮೊನಾಂಕ್
ಗುರಿ ಬೆನ್ನಟ್ಟಿದ ಅಮೆರಿಕ ಪರ 38 ಎಸೆತಗಳಲ್ಲಿ 50 ರನ್ ಗಳಿಸಿದ ಮೊನಾಂಕ್ ಮಿಂಚಿದರು. ಕೊನೆಯ ಓವರ್ನಲ್ಲಿ 12 ರನ್ಗಳ ಅಗತ್ಯವಿದ್ದಾಗ ಮಿಂಚಿದ ಜೋನ್ಸ್ 11 ರನ್ ಗಳಿಸಿದರು. ಅವರು 26 ಎಸೆತಗಳಲ್ಲಿ 36 ರನ್ ಗಳಿಸಿ ಔಟಾಗದೆ ಉಳಿದರು.