ಬೆಂಗಳೂರು :
SSLC ಪಾಸಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಬದಲಾವಣೆಗಳು ಇದ್ದರೆ ಅದನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಂಕಪಟ್ಟಿಯಲ್ಲಿ ತಂದೆ, ತಾಯಿ ಹೆಸರು, ಜನ್ಮ ದಿನಾಂಕ ಸೇರಿದಂತೆ ಇತರೆ ಬದಲಾವಣೆಗಳು ಇದ್ದರೆ ಶಾಲಾ ಮುಖ್ಯಸ್ಥರಿಗೆ ದಾಖಲೆಗಳನ್ನು ಸಲ್ಲಿಸಬೇಕು. ಅವರು ಮಂಡಳಿಯ ವೆಬ್ಸೈಟ್ಗೆ ತಿದ್ದುಪಡಿ ಬಗ್ಗೆ ಅಪ್ಡೇಟ್ ಮಾಡಲಿದ್ದಾರೆ. ಇದರ ಶುಲ್ಕವೂ ಆನ್ಲೈನ್ನಲ್ಲೇ ತುಂಬಬೇಕಿದೆ.