ಬೆಳಗಾವಿ :
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಬೇವಾಡಿ ಗ್ರಾಮದಿಂದ ಮಣ್ಣೂರ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗಾಗಿ 80 ಲಕ್ಷ ರೂ. ಮಂಜೂರು ಮಾಡಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಬೆಳಗಾವಿ ಗ್ರಾಮೀಣ ಕ್ಷೇತ್ರಗಳ ರಸ್ತೆಗಳಲ್ಲಿ ಬಹುತೇಕ ಕಾಂಕ್ರೀಟೀಕರಣ ಮಾಡಲಾಗಿದ್ದು ಇವುಗಳು ಬಹುಕಾಲ ಬಾಳಿಕೆ ಬರುವಂತೆ ಜನತೆ ಉಪಯೋಗಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಮಯದಲ್ಲಿ ಅಮುಲ್ ಭಾತ್ಕಂಡೆ, ಯುವರಾಜಣ್ಣ ಕದಂ, ಯುವ ಕಾಂಗ್ರೆಸ್ ಮುಖಂಡ ಶಿವಾಜಿ ಕಾಂಬಳೆ, ಮೃಣಾಲ್ ಹೆಬ್ಬಾಳಕರ, ವಿಕ್ರಂ ತರಳೆ, ಪುಂಡಲೀಕ ಬಾಂದುರ್ಗೆ, ಸಂಗೀತಾ ಅಂಬೇಕರ್, ಯಲ್ಲಪ್ಪ ಲೋಹಾರ, ಮಲಪ್ಪ ತರಳೆ, ಸುನೀಲ್ ರಕ್ಷೆ, ಜಯವಂತ ಬಾಳೆಕುಂದ್ರಿ, ನಾರಾಯಣ ಲೋಹಾರ್, ಕೃಷ್ಣ ಹೊನಗೆಕರ್ ಗ್ರಾಮ ಪಂಚಾಯತ್ ಸದ್ಯಸರು ಹಾಗೂ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.
ಮಂದಿರದ ಸ್ಲ್ಯಾಬ್ ನಿರ್ಮಾಣ ಕಾಮಗಾರಿಗೆ ಚಾಲನೆ
ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುಕಡೋಳ್ಳಿ ಗ್ರಾಮದ ಶ್ರೀ ದುರ್ಗಾದೇವಿ ಮಂದಿರದ ಸ್ಲ್ಯಾಬ್ ಹಾಕುವ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಗ್ರಾಮಸ್ಥರು ಸೇರಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ತೆರಳಿ ಮಕ್ಕಳ ವಿದ್ಯಾಭ್ಯಾಸದ ಕುರಿತು ಶಿಕ್ಷರರೊಂದಿಗೆ ಚರ್ಚಿಸಿ, ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮದ ಕುಂದುಕೊರತೆಗಳನ್ನು ಸಹ ಆಲಿಸಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಈರಣಗೌಡ ಪಾಟೀಲ, ರಮೇಶ ಮರಕಟ್ಟಿ, ಮಂಜು ಹುಬ್ಬಳ್ಳಿ, ಬಸವರಾಜ ಪಕ್ಕೀರ್, ಎಸ್ ಡಿ ಎಂ ಸಿ ಪದಾಧಿಕಾರಿಗಳು ಗ್ರಾಮ ಪಂಚಾಯಿತಿಯ ಅಧಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
*ಪರಿಶಿಷ್ಟರ ಕಾಲೋನಿಯಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ*
ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಣ್ಣೂರ ಗ್ರಾಮದ ಎಸ್ ಸಿ ಕಾಲೋನಿಯ ರಸ್ತೆಗಳ ಅಭಿವೃದ್ಧಿಗಾಗಿ ಅನುದಾನವನ್ನು ಮಂಜೂರು ಮಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಶುಕ್ರವಾರ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಕ್ಷೇತ್ರದಾದ್ಯಂತ ಮೂಲ ಸೌಕರ್ಯಗಳ ಅಭಿವೃದ್ಧಿ ಕಾರ್ಯವನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಹಮ್ಮಿಕೊಂಡು ಜನತೆಗೆ ಅನುಕೂಲಗಳನ್ನು ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.
ಈ ಸಮಯದಲ್ಲಿ ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ, ಸರಿತಾ ನಾಯ್ಕ್, ಸಚಿತಾ ಸಾಂಬ್ರೇಕರ್, ರಾಮ ಚೌಗುಲೆ, ಜಯವಂತ ಬಾಳೇಕುಂದ್ರಿ, ಜಯಶ್ರೀ ನಾಯ್ಕ್, ಕೃಷ್ಣ ದೇವರಮನಿ, ನಾರಾಯಣ ಶಹಾಪುರಕರ್, ಪದ್ಮರಾಜ ಪಾಟೀಲ, ಆಪ್ತ ಸಹಾಯಕರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.