ಉಡುಪಿ :
ಕಾಂಗ್ರೆಸ್ ಸರಕಾರ ಉಚಿತ ಗ್ಯಾರಂಟಿ ಯೋಜನೆ ಜಾರಿಗೊಳಿಸುತ್ತಿದ್ದು ಮದ್ಯಪ್ರಿಯರಿಗೆ ಉಚಿತವಾಗಿ ಮದ್ಯ ನೀಡುವಂತೆ ಆಗ್ರಹಿಸಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ಮನವಿ ರವಾನಿಸಿದರು.
ಉಡುಪಿ ನಾಗರಿಕ ಸಮಿತಿ ವತಿಯಿಂದ ಮದ್ಯಪ್ರಿಯರು ಮಂಗಳವಾರ ಉಡುಪಿಯಲ್ಲಿ ಪ್ರತಿಭಟನೆ ನಡೆಸಿದರು.
ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿ
ಡೋಲು ಬಡಿದು ರಾಜ್ಯ ಸರ್ಕಾರಕ್ಕೆ ಉಚಿತ ಮದ್ಯ ವಿತರಿಸುವಂತೆ ಮನವಿ ಮಾಡಿದರು.
ಸರಕಾರ ತನ್ನ ಉಚಿತ ಯೋಜನೆಗಳಡಿ ಮದ್ಯಪ್ರಿಯರಿಗೆ ಬೆಳಗ್ಗೆ 90 ಎಂಎಲ್, ಸಂಜೆ 90 ಎಂಎಲ್ ಮದ್ಯವನ್ನು ಉಚಿತವಾಗಿ ನೀಡಲು ಆಗ್ರಹಿಸಿದರು.
ಮದ್ಯದಿಂದ ರಾಜ್ಯ ಸರಕಾರಕ್ಕೆ ಹೆಚ್ಚು ಆರ್ಥಿಕ ಬಲ ಸಿಗುತ್ತದೆ. ಮದ್ಯಪ್ರಿಯರು ನೀಡುವ ಸುಂಕದಿಂದ ಸರಕಾರದ ಬೊಕ್ಕಸ ತುಂಬುತ್ತದೆ. ಇದರಿಂದ ಉಚಿತ ಯೋಜನೆಗಳನ್ನು ಜಾರಿಗೆ ಅನುಕೂಲವಾಗಿದೆ. ಆದರೆ, ಸರಕಾರ ಬಜೆಟ್ ನಲ್ಲಿ ಮದ್ಯದ ಬೆಲೆ ಏರಿಕೆ ಮಾಡಿ ಅನ್ಯಾಯ ಮಾಡಿದೆ. ಒಂದೇ ಉಚಿತ ಮದ್ಯ ನೀಡಬೇಕು, ಇಲ್ಲವೇ ಮದ್ಯ ಬಂದ್ ಮಾಡಿ ಎಂದು ಮದ್ಯಪ್ರಿಯರು ಒತ್ತಾಯಿಸಿದರು.