ಬೆಳಗಾವಿ: ಹೊಸಪೇಟೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯು ಆಯೋಜಿಸಿದ್ದ 2025-26 ನೇ ಸಾಲಿನ ರಾಜ್ಯಮಟ್ಟದ 45 ಕೆಜಿ ಕುಸ್ತಿ ವಿಭಾಗದಲ್ಲಿ ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಶ್ರೀಮತಿ ಲೀಲಾವತಿ ವೆಂಕಟೇಶ ಕರಗುಪ್ಪಿಕರ ಪ್ರೌಢಶಾಲೆಯ 8 ನೇ ವರ್ಗದ ವಿದ್ಯಾರ್ಥಿ ಕಪಿಲಕುಮಾರ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವಿದ್ಯಾರ್ಥಿಯ ಸಾಧನೆಯನ್ನು ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಪರಮಪೂಜ್ಯ ಜಗದ್ಗುರು ಮಹಾಸ್ವಾಮಿಗಳು ಹಾಗೂ ಮಹಾಸ್ವಾಮಿಗಳು ತೋಂಟದ ಸಿದ್ಧರಾಮ ಅಲ್ಲಮಪ್ರಭು ಸ್ವಾಮೀಜಿ, ಆಡಳಿತ ಮಂಡಳಿಯ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯ ಆರ್. ಆರ್. ಮಧಾಳೆ ಮತ್ತು ದೈಹಿಕ ಶಿಕ್ಷಕ ಎನ್ .ಬಿ.ಪಾಟೀಲ , ಸಿಬ್ಬಂದಿಯವರು ಆಭಿನಂದಿಸಿ, ಶುಭಹಾರೈಸಿದ್ದಾರೆ.


