7 ವರ್ಷಗಳ ಬಳಿಕ ಯಶಸ್ವಿಯಾಗಿ ನಡೆದ ಅಗಸಗಿ ಗ್ರಾಮಸಭೆ..!
ಪಾರದರ್ಶಕ ಆಡಳಿಕ್ಕೆ ನಾಂದಿ ಹಾಡಿದ ನೂತನ ಅಧ್ಯಕ್ಷ ..!
ಕನ್ನಡ ಮಾತನಾಡದ KVG ಬ್ಯಾಂಕ್ ಮ್ಯಾನೇಜರ್ ಎತ್ತಂಗಡಿಗೆ ಠರಾವ..!
ಬೆಳಗಾವಿ : ತಾಲೂಕಿನ ಅಗಸಗಿ ಗ್ರಾಮದಲ್ಲಿ ಸುಮಾರು 7 ವರ್ಷಗಳ ಬಳಿಕ ನೂತನ ಗ್ರಾ ಪಂ ಅಧ್ಯಕ್ಷ ಅಮೃತ ಮುದ್ದಣ್ಣವರ ಗ್ರಾಮ ಸಭೆ ನಡೆಸುವ ಮೂಲಕ ಅಭಿವೃದ್ಧಿ ಆಡಳಿತಕ್ಕೆ ಚಾಲನೆ ನೀಡಿದರು.
2016ರ ಗ್ರಾಮ ಸಭೆಯಲ್ಲಿ ನಡೆದಿದ್ದ ಕ್ಷುಲ್ಲಕ ಕಾರಣಗಳ ಗದ್ದಲದಿಂದಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೇಸತ್ತಿದ್ದರು. ಹೀಗಾಗಿ ಆಮೇಲೆ ಬಂದ ಅಧ್ಯಕ್ಷರು ಹಾಗೂ ಪಿಡಿಓಗಳು ಗ್ರಾಮ ಸಭೆ ಮಾಡುವ ಗೊಜಿಗೆ ಹೋಗಿರಲಿಲ್ಲ.
ಆದರೆ 6 ತಿಂಗಳ ಹಿಂದಷ್ಟೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಮೃತ ಮದ್ದಣ್ಣವರ ಜನರಿಗೆ ಪಾರದರ್ಶಕ ಆಡಳಿತ ನೀಡುವ ಉದ್ದೇಶದಿಂದ ವಿಭಿನ್ನವಾಗಿ ಗ್ರಾಮಸಭೆಯನ್ನು ಆಯೋಜಿಸಿ ಮೆಚ್ಚುಗೆ ಪಡೆದರು.
ಗ್ರಾಮಸಭೆಗೆಗಾಗಿ ಪಂಚಾಯಿತಿ ಪಕ್ಕದಲ್ಲಿರುವ ಶ್ರೀರಾಮೇಶ್ವರ ದೇವಸ್ಥಾನದ ಮುಂದೆ ಪೆಂಡಾಲ ಹಾಕಿಸಿ ಇಲಾಖೆಯ ಎಲ್ಲ ಅಧಿಕಾರಿಗಳನ್ನು ಮತ್ತು ಪಂಚಾಯಿತಿ ವ್ಯಾಪ್ತಿಗೆ ಬರುವ ಅಗಸಗಿ, ಚಲವೇನಟ್ಟಿ ಮತ್ತು ಮಾಳೇನಟ್ಟಿ ಗ್ರಾಮದ ಗ್ರಾಮಸ್ಥರನ್ನು ಆಹ್ವಾನಿಸಿದ್ದರು.
ಸಭೆಗೆ ಬಹುತೇಕ ಅಧಿಕಾರಿಗಳು ಹಾಜರಿದ್ದರು. ಮೂರು ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು. ಇದೆ ಮೊದಲ ಬಾರಿಗೆ ಸಾರ್ವಜನಿಕರಾಗಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಸಭೆ ಪ್ರಾರಂಭವಾಗುತ್ತಿದ್ದಂತೆ ಹಾಜರಿದ್ದ ಸಮಾಜ ಸೇವಕರು, ದಲಿತ ಮುಖಂಡರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ದಲಿತ ಮುಖಂಡರಾದ ಸಂತೋಷ ಮೇತ್ರಿ, ಹಾಗೂ ಶಿವಪುತ್ರ ಮೇತ್ರಿ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ನಡೆದಿರುವ ಕಾಮಗಾರಿಗಳ ಬಿಲ್ ಪಲಾನುಭವಿಗಳಿಗೆ ಸಂದಾಯ ಆಗದೆ ಇರುವುದು ಹಾಗೂ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಸಾರ್ವಜನಿಕರ ಗಮನ ಸೆಳೆದರು. ವಿವಿಧ ಇಲಾಖೆಯ ಅಧಿಕಾರಿಗಳ ಬೆಜವಾಬ್ದಾರಿಯಿಂದ ಗ್ರಾಮದಲ್ಲಿ ನಡೆದ ಅನಾಹುತ ಬಗ್ಗೆ ವಿವರಿಸಿದರು.
ಕನ್ನಡ ಬಾರದ,ಮಾತನಾಡದ ಹಾಗೂ ಜನರಿಗೆ ಸ್ಪಂದಿಸಿದ ಕೆವಿಜಿ ಬ್ಯಾಂಕ್ ಮ್ಯಾನೇಜರ್ ಎತ್ತಂಗಡಿ ಮಾಡಬೇಕು ಎಂದು ಸದಸ್ಯರು ಹಾಗೂ ಸಾರ್ವಜನಿಕರು ಒತ್ತಾಯಿಸಿ ಠರಾವ ಪಾಸ್ ಮಾಡಿಸಿದರು. ಶೀತಿಲಾವಸ್ತೆಯಿಂದಾಗಿ ಮುಚ್ಚಿರುವ ಸಾರ್ವಜನಿಕ ಆಸ್ಪತ್ರೆ ಜಾಗದಲ್ಲಿ ಹೊಸ ಆಸ್ಪತ್ರೆ ಕಟ್ಟಡ ಆಗಬೇಕು. ಅಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಕ್ಷಣ ಮಟ್ಟಹಾಕುವಂತೆ ಒತ್ತಾಯಿಸಿದರು.
ಇದೆ ಸಂದರ್ಭದಲ್ಲಿ ಗ್ರಾಮದಲ್ಲಿ ಧರ್ಮದ ದೈವ ಸೇವೆಗಾಗಿ ನೀಡಿರುವ ಜಾಗವನ್ನು ಅಕ್ರಮವಾಗಿ ನಿವೇಶನ ಮಾಡಿ ಮಾರಾಟ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೃಷಿ ಜಮೀನಿನಲ್ಲಿ ಕಾನೂನು ಬಾಹಿರವಾಗಿ ನಿವೇಶನಗಳನ್ನು ಹಾಕಿ ಸಾರ್ವಜನಿಕ ಉಪಯೋಗಕ್ಕೆ ಜಾಗ ಬಿಡದೆ ಸಮಸ್ಯೆ ಉದ್ಭವಿಸುವ ಲೇಔಟ್ ಗಳ ವಿರುಧ್ಧ ಕ್ರಮ ಕೈಕೊಳ್ಳಬೇಕು. ಗ್ರಾಮದಲ್ಲಿನ ಕ್ರೀಡಾಪಟುಗಳಿಗೆ ವಿಧ್ಯಾರ್ಥಿಗಳಿಗೆ, ಯುವಕರಿಗೆ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಆಟದ ಮೈದಾನವನ್ನು ತಕ್ಷಣ ನಿರ್ಮಾಣ ಮಾಡಬೇಕು ಎಂದು ಪತ್ರಕರ್ತರು ಒತ್ತಾಯಿಸಿದರು.
ಸ್ಥಳಿಯ ಶಾಸಕ ಹಾಗೂ ಸಚಿವ ಸತೀಶ ಜಾರಕಿಹೊಳಿ ಆಪ್ತ ಸಹಾಯಕ ಮಲಗೌಡ ಪಾಟೀಲ ಮಾತನಾಡಿ ಗ್ರಾಮದ ಅಭಿವೃದ್ಧಿಗಾಗಿ ಸದಾ ಸಹಕರಿ, ಶ್ರಮಿಸಿ ಮಾದರಿ ಗ್ರಾಮ ಮಾಡುವುದಾಗಿ ಭರವಸೆ ನೀಡಿದರು.
ಏಳು ವರ್ಷಗಳಿಂದ ನಡೆಯದ ಗ್ರಾಮ ಸಭೆ ಬಗ್ಗೆ ಸದಾ ಪ್ರಶ್ನೆ ಮಾಡುತ್ತಲೇ ಬಂದಿದ್ದ ಕಲ್ಲಪ್ಪಾ ಮೇತ್ರಿ ಸಭೆಯಲ್ಲಿ ತಮಗೆ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅಳಲು ತೊಡಿಕೊಂಡರು. ಕೆಲ ಸಮಸ್ಯೆಗಳ ಬಗ್ಗೆ ಪರಿಹಾರ ನೀಡಿದ ಅಧಿಕಾರಿಗಳನ್ನು ತಿವ್ರ ತರಾಟೆಗೆ ತಗೆದುಕೊಂಡರು.
ಅಧ್ಯಕ್ಷ ಅಮೃತ ಹಾಗೂ ಪಿಡಿಓ ಜಮಾದಾರ, ಸದಸ್ಯ ಅಪ್ಪಯ್ಯಗೌಡ ಪಾಟೀಲ, ಗುಂಡು ಕುರೇನ್ನವರ ಬಹುತೇಕ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ನೀಡಿ, ಕೇಲ ಪ್ರಶ್ನೆಗಳಿಗೆ ಸಮಯಾವಕಾಶ ಪಡೆದರು. ಗ್ರಾಮದಲ್ಲಿ ದಶಕಗಳಿಂದ ಹಲವು ಸಮಸ್ಯೆಗಳನ್ನು ಪರಿಹರಿಸಲು ಠರಾವ ಪಾಸ್ ಮಾಡಿದರು. ಆರು ತಿಂಗಳಿಗೊಮ್ಮೆ ಗ್ರಾಮಸಭೆ ನಡೆಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಬೆಳಗ್ಗೆ 11 ಗಂಟೆಗೆ ಪ್ರಾರಂಭಿಸಿದ್ದ ಸಭೆಯನ್ನು ಸಂಜೆ 6 ಗಂಟೆಯವರೆಗೆ
ಯಶಸ್ವಿಯಾಗಿ ನಡೆಸುವಲ್ಲಿ ಯಶಸ್ವಿಯಾದರು.
ಸಭೆಗೆ ಗ್ರಾಮ ಪಂ ಅಧ್ಯಕ್ಷ ಅಮೃತ ಮುದ್ದಣ್ಣವರ, ಪಿಡಿಓ ಜಮಾದಾರ, ಸದಸ್ಯ ಅಪ್ಪಯ್ಯಗೌಡ ಪಾಟೀಲ, ಗುಂಡು ಕುರೆನ್ನವರ, ಉಪಾಧ್ಯಕ್ಷ ಶೋಭಾ ಕುರೆನ್ನವರ, ಸದಸ್ಯರಾದ ನಿಂಗವ್ವಾ ಪಾಟೀಲ, ಯಲ್ಲಪ್ಪಾ ಪಾಟೀಲ, ಭೈರು ಕಂಗ್ರಾಳಕರ, ರುಕ್ಮಣ್ಣ ಬಾಳೆಕುಂದ್ರಿ, ಲಕ್ಷ್ಮೀ ಸನದಿ, ಚನ್ನಮ್ಮಾ ತಿರಮಾಳೆ, ಉಮಾ ಅಪ್ಪಯ್ಯ ಕೋಲಕಾರ, ರೇಣುಕಾ ಸನದಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ನೂಡಲ ಅಧಿಕಾರಿ ಎಸ್ ಪಿ ದಾಸಪ್ಪನವರ, ಕೃಷಿ ಅಧಿಕಾರಿ ಸವಿತಾ ಪರೀಟ್, ತೋಟಗಾರಿಕೆ ಅಧಿಕಾರಿ ರೂಪಾ ನಾಶಿ ಸಹಾಯಕ ವೈದ್ಯ ವಿಜಯಲಕ್ಷ್ಮಿ ಹಸಬೆ, ಪಶು ಇಲಾಖೆ ಸಿಬ್ಬಂದಿ ಸಂತೋಷ ಲಾಡ, ತಲಾಠಿ ರಾಣಿ ಪಾಟೀಲ, Hescom ಅಧಿಕಾರಿ ವಿನಯ ಬಕರಿ, ರೇಷ್ಮೆ ಇಲಾಖೆ ಅಧಿಕಾರಿ MM ನಾಯಿಕ, ಮುಖ್ಯೋಪಾಧ್ಯಾಯ ಎಂ ಬಿ ಬೆಳಗಾವಿ, ವರ್ನುರಕರ, ಗ್ರಾಮ ಗ್ರಂಥ ಪಾಲಕ ಅಪ್ಪಯ್ಯ ಕೊಲಕಾರ ಆಶಾ ಕಾರ್ಯಕರ್ತೆ ನಿರ್ಮಲಾ ಮಾಸ್ತಮರಡಿ, ಮಾಹಾದೇವಿ ಕುರೇನ್ನವರ, ಸವಿತಾ ಮಾರಿಹಾಳ ಗ್ರಾ ಪಂ ಕಾರ್ಯದರ್ಶಿ ಪುಂಡಲಿಕ ಕುರಬೇಟ, ಸಿಬ್ಬಂದಿ ಮಹೇಶ ಹಂಪನ್ನವರ, ನಾರಾಯಣ ನಾಥಬುವಾ, ಉಮೇಶ್ ಕಾಂಬಳೆ, ಹಿರಾಮನಿ, ಜಯಪ್ಪಾ ಕೋಲಕಾರ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆ ಮಹಾದೇವಿ, ಮಂಗಲ, ಸನದಿ ಸೇರಿದಂತೆ ಹಲವು ಅಧಿಕಾರಿಗಳು ಸೇರಿ ನೂರಾರು ಗ್ರಾಮಸ್ಥರು ಹಾಜರಿದ್ದರು.