ಬೆಳಗಾವಿ :ಸ್ಮಶಾನದಲ್ಲಿ ಪೂಜೆ ಮಾಡಿ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ ನೀಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮಾಡುವುದು ಸಂಪ್ರದಾಯ ವಿರೋಧಿ ಆಗಲ್ಲ, ನಮ್ಮ ವಿಚಾರ ಅದು. ಈ ಕೆಲಸ ಇವತ್ತು ಮಾಡುತ್ತಿಲ್ಲ. ಕಳೆದ ಮೂವತ್ತು ವರ್ಷಗಳಿಂದಲೂ ಮಾಡುತ್ತಿದ್ದೇವೆ ಎಂದರು.
ನಾವು ಹೋಗುತ್ತಿರುವ ದಾರಿಯನ್ನು ಬುದ್ದ, ಬಸವಣ್ಣ, ಅಂಬೇಡ್ಕರ್ ತೋರಿಸಿದ್ದಾರೆ. ನಮ್ಮ ಆಯ್ಕೆ ನಮಗೆ ಬಿಡಿ, ಹೀಗೆ ಮಾಡಿ ಅಂದ್ರೇ ಆಗುವುದಿಲ್ಲ. ಈ ಸಲ ಯಮಕನಮರಡಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗುತ್ತೇನೆ. ಇಲ್ಲವಾದ್ರೇ ನಮ್ಮ ವಿರೋಧಿಗಳು ಅಪಪ್ರಚಾರ ಮಾಡುತ್ತಾರೆ. ಅತಿಹೆಚ್ಚು ಅಂತರದಿಂದ ಗೆಲ್ಲಿಸಬೇಕೆಂಬುದು ನಮ್ಮ ಸ್ಲೋಗನ್ ಎಂದರು.
ಸ್ಮಶಾನದಲ್ಲಿ ಪೂಜೆ ಮಾಡಿ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ ನೀಡುತ್ತೇವೆ : ಸತೀಶ ಜಾರಕಿಹೊಳಿ
