ಬೆಂಗಳೂರು : ಉಪಚುನಾವಣೆ ಬಳಿಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಟಿಕೆಟ್ ದರ ಏರಿಕೆಯಾಗಲಿದೆ ಎಂದು ವರದಿಯಾಗಿದೆ.
ಕೆಎಸ್ಆರ್ ಟಿಸಿ, ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದೆ ಎನ್ನಲಾಗುತ್ತದೆ. ನಾಲ್ಕು ವರ್ಷದಿಂದ ಕೆಎಸ್ಆರ್ ಟಿಸಿ ಟಿಕೆಟ್ ದರ ಪರಿಷ್ಕರಣೆ ಆಗಿಲ್ಲ. 2013 ರಿಂದ ಬಿಎಂಟಿಸಿ ಬಸ್ ಪ್ರಯಾಣ ಸಹ ಏರಿಕೆ ಆಗಿಲ್ಲ. ಕಲ್ಯಾಣ ಕರ್ನಾಟಕ ಹಾಗೂ ವಾಯವ್ಯ ಕರ್ನಾಟಕ ಬಸ್ ಪ್ರಯಾಣ ನಾಲ್ಕು ವರ್ಷದಿಂದ ಪರಿಷ್ಕರಣೆ ಆಗಿಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಟಿಕೆಟ್ ದರ ಅನಿವಾರ್ಯ ಎಂದು ಸಾರಿಗೆ ನಿಗಮಗಳು ಹೇಳುತ್ತಿವೆ. ಈ ಹಿನ್ನೆಲೆ ಚುನಾವಣಾ ಬಳಿಕ ಬಸ್ ದರ ಏರಿಸುವ ಬಗ್ಗೆ ಭರವಸೆಯನ್ನು ಸರ್ಕಾರ ನೀಡಿದೆ ಎನ್ನಲಾಗಿದೆ.