ವಕೀಲ ರಾಜು ಹಂಜಿ ನಿಧನ..!
ಹಿಡಕಲ್ ಡ್ಯಾಮ್ ಗ್ರಾಮದಲ್ಲಿಂದು ಅಂತ್ಯಸಂಸ್ಕಾರ ..!
ಬೆಳಗಾವಿ: ನಗರದ ಬಾರ್ ಅಸೋಸಿಯೇಷನ್ ಸದಸ್ಯ ಹಾಗೂ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ 51 ವರ್ಷದ ನ್ಯಾಯವಾದಿ ರಾಜು ಕೆಂಪಣ್ಣಾ ಹಂಜಿ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ನಸುಕಿನ ಜಾವ 1 ಗಂಟೆಗೆ ನಗರದ ಕೆಎಲ್ಇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೂಲತಃ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಗ್ರಾಮದವರಾದ ಇವರು ಪ್ರಾಥಮಿಕ , ಮಾಧ್ಯಮಿಕ ಶಿಕ್ಷಣವನ್ನು ಅಲ್ಲೆ ಮುಗಿಸಿದ್ದರು. ನಂತರ ಬೆಳಗಾವಿಯಲ್ಲಿ LLB ಮುಗಿಸಿ ನಂತರ ವಕೀಲರಾಗಿ ಇಲ್ಲೇ ವೃತ್ತಿ ಆರಂಭಿಸಿದ್ದರು. ಪ್ರಸ್ತುತ ಕಂಗ್ರಾಳಿ ಕೆ ಎಚ್ ಗ್ರಾಮದಲ್ಲಿ ವಾಸವಾಗಿದ್ದರು.
ಮೃತರಿಗೆ ತಂದೆ,ತಾಯಿ, ಪತ್ನಿ, ಪುತ್ರಿ, ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.
ಲಿಂಗಾಯತ ಸಮಾಜದ ವಿಧಿವಿಧಾನಗಳಂತೆ ಇಂದು ಹಿಡಕಲ್ ಡ್ಯಾಮ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.