ಚಿಕ್ಕೋಡಿ:
ತಾಲೂಕಿನ ಕಬ್ಬೂರ ಪಟ್ಟಣದಲ್ಲಿ ಗುರುವಾರ ಶ್ರೀ ಆದಿಶಕ್ತಿ ಅಂಬಾಭವಾನಿ ದೇವಸ್ಥಾನದ ವಾಸ್ತು ಶಾಂತಿ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಚಂಡಿಕಾ ಯಾಗ ಕಾರ್ಯಕ್ರಮ ಜರುಗಲಿದೆ ಎಂದು ಕಬ್ಬೂರ ಗೋಂಧಳಿ ಸಮಾಜದ ಅಧ್ಯಕ್ಷ ರಾಜಾರಾಮ. ಎಸ್. ಗೋಂಧಳಿ ತಿಳಿಸಿದ್ದಾರೆ.
ನ. 2 ರಂದು ಮುಂಜಾನೆ 6 ರಿಂದ 12 ಗಂಟೆಯವರೆಗೆ ನೂತನ ಮಂದಿರದ ವಾಸ್ತು ಶಾಂತಿ ಕಾರ್ಯಕ್ರಮ ಹಾಗೂ ಮಹಾಪ್ರಸಾದ ಜರುಗಲಿದ್ದು, ಮಧ್ಯಾಹ್ನ 1 ಗಂಟೆಗೆ ಶ್ರೀ ಅಂಬಾಭವಾನಿ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲವಾದ್ಯ ಮೇಳ ಹಾಗೂ ಸುಮಂಗಲೆಯರ ಕುಂಭೋತ್ಸವದೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಗುವುದು.
ನ. 3 ರ ಶುಕ್ರವಾರ ಬೆಳಗ್ಗೆ 10 ರಂದು ದೇವಸ್ಥಾನ ಲೋಕಾರ್ಪಣೆ ಹಾಗೂ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಲಿದ್ದು, ನಿಡಸೋಸಿ ಸಿದ್ದ ಸಂಸ್ಥಾನ ಮಠದ ಶ್ರೀ. ನಿರಂಜನ ಪ್ರಣವ ಸ್ವರೂಪ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ದಿವ್ಯಸಾನಿದ್ಯ ವಹಿಸಲಿದ್ದು, ಕಬ್ಬೂರು ಗೌರಿಶಂಕರ ಮಠದ ಶ್ರೀ. ಷ. ಬ್ರ. ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ.
ನ. 4 ರ ಬೆಳಿಗ್ಗೆ 6 ರಿಂದ 12 ರವರೆಗೆ ಚಂಡಿಕಾ ಮಹಾಯಾಗ ಹಾಗೂ ನ. 5 ರಂದು ಮೂರ್ತಿಗೆ ಮಹಾಭಿಷೇಕ ನೆರವೇರಲಿದ್ದು, ಅದೇ ದಿನ ರಾತ್ರಿ 9 ಗಂಟೆಗೆ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಮರುದಿನ ಮೂರ್ತಿಯ ಮಹಾಭಿಷೇಕದೊಂದಿಗೆ ಕಾರ್ಯಕ್ರಮ ಸಮಾರೋಪಗೊಳ್ಳಲ್ಲಿದೆ. ಹಾಗಾಗಿ ಭಕ್ತಗಣ ಹೆಚ್ಚಿನ ಸಂಖ್ಯೆಯಲ್ಲಿ ದೈವ ಕಾರ್ಯಕ್ಕೆ ಆಗಮಿಸಿ, ಆದಿಶಕ್ತಿಯ ಕೃಪೆಗೆ ಪಾತ್ರರಾಗುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಮಾಜಿ ಸಂಸದ ರಮೇಶ್ ಕತ್ತಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ. ಎಂ. ಕವಟಗಿಮಠ, ಹಿರಾ ಶುಗರ ಸಂಕೇಶ್ವರ ನಿರ್ದೇಶಕ ಸುರೇಶ ಬೆಲ್ಲದ್, ಹಿರಾ ಶುಗರ ಸಂಕೇಶ್ವರ ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಜಯಸಿಂಗ್ ಸನದಿ, ಹಿರಿಯ ನ್ಯಾಯವಾದಿ ತುಕಾರಾಮ. ಯ ಕಿವಡ, ಹಾಗೂ ರಾಮಚಂದ್ರ ಬಾಕಳೆ, ಕಬ್ಬೂರ ಪಿಕೆಪಿಎಸ್ ಅಧ್ಯಕ್ಷ ಮಿಲನ ಪಾಟೀಲ್, ಪ್ರಥಮ ದರ್ಜೆ ಗುತ್ತಿಗೆದಾರ ಮಹದೇವ್ ಜಿವನಿ, ರೈತ ಮಹದೇವ ಪ್ರಧಾನಿ, ಬೆಳಗಾವಿ ಆರ್ ಟಿ ಓ ರವಿ ಬಿಸ್ಸೆ, ಗೋಂಧಳಿ ಸಮಾಜದ ಮುಖಂಡರಾದ ಹನುಮಂತ ಖ ಗೋಂಧಳಿ, ಸುರೇಶ್. ಬ. ಸುಗುಟೆ, ಹಾಗೂ ಪಟ್ಟಣದ ಸಮಾಜ ಬಾಂಧವರು ಹಾಗೂ ಸಮಸ್ತ ನಾಗರಿಕರು ಉಪಸ್ಥಿತಲಿರುವರು.