ಬೆಳಗಾವಿ : ಕೆಎಲ್ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯವು ಸುವರ್ಣ ಮಹೋತ್ಸವ ಅಂಗವಾಗಿ ಹಳೆಯ ವಿದ್ಯಾರ್ಥಿ ಸಂಘಟನೆ ಏಪ್ರಿಲ್ 6 ರವಿವಾರ, 2025ರ ರಂದು ಮುಂಜಾನೆ 7 ಗಂಟೆಗೆ “ಅಲೂಮ್ನಿ ವಾಕಥಾನ್” (ಹಳೆಯ ವಿದ್ಯಾರ್ಥಿಗಳ ನಡೆಯುವ ಸ್ಪರ್ಧೆ) ಕಾರ್ಯಕ್ರಮವನ್ನು ಆಯೋಜಿಸಿದೆ. ಈ ವಾಕ್ಥಾನ್ಕ್ಕೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಚಾಲನೆ ನೀಡಲಿದ್ದಾರೆ ಎಂದು ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಜ್ಯೋತಿ ಹಿರೇಮಠ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಐತಿಹಾಸಿಕ ಕಾಲೇಜು: ಗುಣಮಟ್ಟದ ಕಾನೂನು ಶಿಕ್ಷಣವನ್ನು ನೀಡುವಲ್ಲಿ 50 ವರ್ಷಗಳ ಶ್ರೇಷ್ಠ ಸೇವೆಯನ್ನು ಪೂರೈಸಿದ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯ ಈ ಸುವರ್ಣ ಸಂಭ್ರಮಾಚರಣೆಯನ್ನು ನೆರವೇರಿಸಲು ಹಲವಾರು ವೈವಿಧ್ಯಪೂರ್ಣವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. 1975ರಲ್ಲಿ ಸ್ಥಾಪನೆಯಾದ ಈ ಮಹಾವಿದ್ಯಾಲಯ, ಕೆ.ಎಲ್.ಇ. ಸಂಸ್ಥೆ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಮಹಾವಿದ್ಯಾಲಯವು 3 ವರ್ಷ ಹಾಗೂ 5 ವರ್ಷದ ಕಾನೂನು ಪದವಿ ಕೋರ್ಸುಗಳನ್ನು ನೀಡುತ್ತಿದೆ. ಲಿಂಗರಾಜ ಮಹಾವಿದ್ಯಾಲಯದ ವಿಶಾಲ ಆವರಣದಲ್ಲಿ ಇರುವ ಈ ಸಂಸ್ಥೆಯ ಉದ್ದೇಶ “ಸಮಾನತಾವಾದಿ ಸಮಾಜ ನಿರ್ಮಿಸಲು ಸಾಮಾಜಿಕ ಜವಾಬ್ದಾರಿಯನ್ನು ಸೃಷ್ಟಿಸುವ ಗುಣಮಟ್ಟದ ಕಾನೂನು ಶಿಕ್ಷಣವನ್ನು ನೀಡುವುದು” ಆಗಿದ್ದು, “ಕಾನೂನಿನ ಮೂಲಕ ನಾಗರಿಕರನ್ನು ಮಾನವೀಯಗೊಳಿಸುವುದು” ಮುಖ್ಯ ಧ್ಯೇಯವನ್ನು ಹೊಂದಿದೆ.
ಆರಂಭದಲ್ಲಿ ಈ ಮಹಾವಿದ್ಯಾಲಯ “ಕೆ.ಎಲ್.ಇ. ಸಂಸ್ಥೆಯ ಸಂಜೆ ಕಾನೂನು ಮಹಾವಿದ್ಯಾಲಯ, ಬೆಳಗಾವಿ” ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿತ್ತು. 1982ರಲ್ಲಿ ಹಿರಿಯ ವಕೀಲ ಹಾಗೂ ಶಿಕ್ಷಣಾಸಕ್ತಿಯಾಗಿದ್ದ ಬಿ.ವಿ. ಬೆಲ್ಲದ ಅವರು ಶಿಕ್ಷಣ ಕ್ಷೇತ್ರದ ಬೆಳವಣಿಗೆಯಿಗಾಗಿ ಅಸಾಧಾರಣ ಶ್ರಮವಹಿಸಿ, ಈ ಮಹಾವಿದ್ಯಾಲಯದ ಸ್ಥಾಪನೆಗೆ ಒಂದು ಲಕ್ಷ ರೂಪಾಯಿಗಳನ್ನು ದಾನವಾಗಿ ನೀಡಿದರು. ಅವರ ಅಮೂಲ್ಯ ಸೇವೆಗೆ ಗೌರವ ಸೂಚಿಸಿ, ಕೆ.ಎಲ್.ಇ. ಸಂಸ್ಥೆಯು ಈ ಸಂಸ್ಥೆಗೆ “ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯ” ಎಂಬ ಹೆಸರನ್ನು ಮಾಡಿ ಕೃತಜ್ಞತೆಯನ್ನು ಸಲ್ಲಿಸಿದೆ.
ಈ ಮಹಾವಿದ್ಯಾಲಯವು 2009-10ರಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಯಿಂದ ಶಾಶ್ವತ ಅಂಗೀಕಾರವನ್ನು ಪಡೆದುಕೊಂಡಿದೆ. ಯುಜಿಸಿ 2(ಜಿ) ಮತ್ತು 12(ಃ) ಅಡಿಯಲ್ಲಿ ಮಾನ್ಯತೆ ಹೊಂದಿದ್ದು, ಭಾರತದ ವಕೀಲರ ಪರಿಷತ್, ನವದೆಹಲಿಯಿಂದ ಅನುಮೋದಿತವಾಗಿದೆ. ನ್ಯಾಕ್ ಮೂರನೇ ಮರು ಮೌಲ್ಯಮಾಪನದಲ್ಲಿ ಬಿ+ ಶ್ರೇಯಾಂಕವನ್ನು ಪಡೆದಿದೆ.
ಈ ಕಲಿತ ಅಸಂಖ್ಯ ವಿದ್ಯಾರ್ಥಿಗಳು ಸರ್ವೋಚ್ಛನ್ಯಾಯಾಲಯ ಹಾಗೂ ಉಚ್ಚನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಂತರಾಷ್ಟ್ರೀಯ ನೆಲೆಗಳಲ್ಲಿ ಸೇವೆಯ್ನನು ಸಲ್ಲಿಸುತ್ತಿದ್ದಾರೆ. ಕಾಲಕಾಲಕ್ಕೆ ಕಾಲೇಜು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಕಾನೂನು ವಿಶ್ವವಿದ್ಯಾಲಯಗಳ ಕಾಲೇಜುಗಳ ರ್ಯಾಂಕಿಂಗನಲ್ಲಿ 25ನೇ ಶ್ರೇಯಾಂಕವನ್ನು ಪಡೆದಿದೆ. ಈ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಕಾನೂನು ವೃತ್ತಿ, ನ್ಯಾಯಾಂಗ ಮತ್ತು ಕಾಪೆರ್Çರೇಟ್ ಕ್ಷೇತ್ರದಲ್ಲಿ ಉತ್ತಮ ಹುದ್ದೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಕ್ರೀಡಾಕ್ಷೇತ್ರದಲ್ಲಿಯೂ ಅಸಾಧಾರಣವಾದ ಸಾಧನೆಯನ್ನು ಗೈದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರೊ.ಸವಿತಾ ಪಟ್ಟಣಶೆಟ್ಟಿ, ದೈಹಿಕ ನಿರ್ದೇಶಕಿ ಡಾ.ರೀಚಾ ರಾವ್, ವಿದ್ಯಾರ್ಥಿ ಪ್ರತಿನಿಧಿ ಆಕಾಶ ಉಪಸ್ಥಿತರಿದ್ದರು.
On its completion of 50 years of remarkable service of imparting quality Legal Education B.V. Bellad Law College, Belagavi is organising series of events. Established in the year 1975, is one of the premier institution of K.L.E. Society. The College offers both 3 years and 5 years Law Courses. Located in the sprawling Campus of Lingaraj College aims “to impart quality legal education to create social engineers to build an egalitarian society. The vision of Enabling the students to reform the Society” and the mission “Humanising the citizens through Law”
Initially the college was well known as K.L.E. Society’s evening Law College, Belgaum. In the year 1982, Shri B. V. BELLAD, Advocate, an Educational enthusiast and a philanthropist who worked tirelessly for educational development, then donated one lakh rupees for the establishment of the K.L.E. Law College in Belgaum. In recognition of his contributions, the K.L.E. Society as a tribute to his dedication renamed the institution as “B.V. Bellad Law College”.
The college has Permanent Affiliation to Karnataka State Law University, Hubballi from 2009-10. Is recognized by UGC under 2 (f) and 12 (B) & Approved by the Bar Council of India. New Delhi. It is re-accredited with B+ level by NAAC in its third cycle.
The College is well manned by qualified and committed academicians with specialization in various laws and social sciences. In addition experienced advocates are employed as Guest Faculty to teach procedural laws. Since establishment the College has been conducting a wide spectrum of programmes. The College has successfully conducted International Conference and National Law Fest twice. The participants in these events have always returned with pleasant memories of the same. The College provides a conducive atmosphere for the academic development of the students and helps him in shaping his career. The testimony to this is an accomplishment of more than 25 University ranks to the credit of the institution. The Alumnus of the College is well placed in legal practice, Judiciary and corporate sector. The members of the Registered Alumni Association actively participates in all the activities of its ALMA MATER. One such activity on the eve of golden jubilee celebration the Alumni Association is organising on 6th April 2025 at morning 7.00 am. i.e., Alumni Walkathon. Inaugurating by Dr Prabhakar Kore, Chairman KLE Society Belagavi.