ಬೆಳಗಾವಿ : ಇಲ್ಲಿಯ ವನಿತಾ ವಿದ್ಯಾಲಯ ವಿದ್ಯಾಲಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾರೆ.
ಎನ್ ವೈರಮೆಂಟಲ್ ಎಡ್ಯುಕೇಶನ್ ಸೆಂಟರ್ ಚೆನ್ನೈ ವಿಪ್ರೊ ಪೌಂಡೇಶನ್ ಬೆಂಗಳೂರು ಇವರು ಪ್ರತಿವರ್ಷ ಪರಿಸರ ಸಂರಕ್ಷಣೆಯ ಉದ್ದೇಶ ಇಟ್ಟುಕೊಂಡು ಉತ್ತಮ ಪರಿಸರ ಸಂರಕ್ಷಣಾ ಯೋಜನೆ ಯೋಜಿಸಿದವರಿಗೆ ವಿಪ್ರೊ ಅರ್ಥಿಯನ್ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸುತ್ತದೆ.
“ವಿಪ್ರೊಅರ್ಥಿಯನ್ ಇದು ಶಾಲಾ ಮತ್ತು ಕಾಲೇಜುಗಳಿಗಾಗಿ ಸುಸ್ಥಿರತೆ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಪ್ರತಿವರ್ಷ ಶಾಲೆಗಳಿಗೆ ಚಟುವಟಿಕೆ ಆಧಾರಿತ ಕಲಿಕಾ ಕಾರ್ಯಕ್ರಮ ಆಯೋಚಿಸುತ್ತಾರೆ. ಇದರಂತೆ 2023-24 ನೇ ಸಾಲಿನ ಈ ಸ್ಪರ್ಧೆಗೆ ರಾಷ್ಟ್ರ ಮಟ್ಟದಲ್ಲಿ ಅನೇಕ ಶಾಲಾ ಕಾಲೇಜುಗಳು ಭಾಗ ವಹಿಸಿದವು ಅದರಲ್ಲಿ ವನಿತಾ ವಿದ್ಯಾಲಯ ಕನ್ನಡ ಮತ್ತು ಮರಾಠಿ ಮಾಧ್ಯಮದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಸತತ 2 ತಿಂಗಳಿಂದ ಇದರ ಕಾರ್ಯ ಚಟುವಟಿಕೆಗಳನ್ನು ಮಾಡಿ ಇದರಲ್ಲಿ ಯಶಸ್ಸನ್ನು ಕಂಡಿದ್ದಾರೆ.
ಇದರ ಹಿನ್ನೆಲೆ, ಅಗಸ್ಟ್ 9 ನೇ ತಾರಿಖು ಈ ಕಾರ್ಯಕ್ರಮದ ಕಾರ್ಯಾಗಾರ ಪ್ರಾರಂಭವಾಯಿತು. ಒಬ್ಬ ವಿಜ್ಞಾನಿ ಶಿಕ್ಷಕ ಮತ್ತು 5 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲು ಅನುವು ಮಾಡಿ ಕೊಡಲಾಗಿತ್ತು. ಶಾಲೆಯ ವಿಜ್ಞಾನ ಶಿಕ್ಷಕಿ ಶಿಲ್ವಿಯಾ ಉಪ್ಪಾರ ಮತ್ತು 9ನೇ ತರಗತಿಯ 5 ವಿದ್ಯಾರ್ಥಿನಿಯರು ಇದರಲ್ಲಿ ಭಾಗವಹಿಸಿ, ಸುಸ್ಥಿತ ಮತ್ತು ತ್ಯಾಜ್ಯ ಎಂಬ ವಿಷಯದಡಿಯಲ್ಲಿ ಮತ್ತು ನಮ್ಮದೇ ಶಾಲೆಯ 2 ನೇ ತಂಡ ಶೀತಲ ದೇಸಾಯಿ ಮತ್ತು ಇವರ 5 ವಿದ್ಯಾರ್ಥಿಗಳು ಜೈವಿಕ ವೈವಿಧ್ಯ ಎಂಬ ವಿಷಯದಡಿಯಲ್ಲಿ ತಮ್ಮ ವರದಿಯನ್ನು ಅಕ್ಟೋಬರ್ 30 ರ ಒಳಗೆ ಮಂಡಿಸಿದ್ದರು.
ರಾಷ್ಟ್ರದ ಒಟ್ಟು 1800 ಶಾಲೆಗಳು ಭಾಗವಹಿಸಿದ್ದವು. ಹೀಗೆ ಮಂಡಿಸಲಾದ ವರದಿಗಳನ್ನು ಪರಿಶೀಲಿಸಿ ಮೊದಲ ಹಂತದಲ್ಲಿ 40 ಶಾಲೆಗಳನ್ನು, ಎರಡನೇ ಹಂತದಲ್ಲಿ 20 ಶಾಲೆಗಳನ್ನು ಮೂರನೇ ಹಂತದಲ್ಲಿ 8 ಶಾಲೆಗಳನ್ನು ಆಯ್ಕೆ ಮಾಡಲಾಗಿತ್ತು. ಈ 8 ಶಾಲೆಗಳಲ್ಲಿ ಕರ್ನಾಟಕದಿಂದ ರಾಷ್ಟ್ರಮಟ್ಟದಲ್ಲಿ ವನಿತಾ ವಿದ್ಯಾಲಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ತಂಡ ಪ್ರಥಮ ಬಹುಮಾನ ಪಡೆಯಿತು. ನಮ್ಮದೇ ಶಾಲೆಯ ಮರಾಠಿ ಮಾಧ್ಯಮದ ವಿದ್ಯಾರ್ಥಿಗಳು ಸ್ಥಳೀಯ ಮಟ್ಟದಲ್ಲಿ ಪ್ರಶಸ್ತಿಗೆ ಭಾಜನರಾದರು.
ಈ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು 24-02-2024 ರಂದು ಬೆಂಗಳೂರಿನ ಸರ್ಜಾಪುರದ ವಿಪ್ರೋ ಕಂಪನಿಯಲ್ಲಿ ಏರ್ಪಡಿಸಲಾಗಿತ್ತು. ಇದರ ಸಂಸ್ಥಾಪಕ ವೃಷಭ ಪ್ರೇಮಜಿ ಇವರು ತಮ್ಮ ಕಂಪನಿಯಲ್ಲಿ ಒಂದು ಬೃಹತ್ ಕಾರ್ಯಕ್ರಮ ಆಯೋಜಿಸಿ ವಿಜೇತರಿಗೆ ಸನ್ಮಾನಿಸಿದರು. ಶಿಲ್ವಿಯಾ ಉಪ್ಪಾರ (ವಿಜ್ಞಾನ ಶಿಕ್ಷಕಿ) ಸೃಷ್ಟಿ ಬಡಿಗೇರ, ಶ್ರೇಯಾ ಖೋದಾನಪುರ, ಸ್ವಾತಿ, ಲಾವಣ್ಯ ಪುಟಾಣಿ, ಮಹಾರಾಜ ಪರಾಣ (ರಾಷ್ಟ್ರ ಮಟ್ಟದ ವಿಜೇತ ವಿದ್ಯಾರ್ಥಿಗಳು) ಶೀತಲ ದೇಸಾಯಿ (ವಿಜ್ಞಾನ ಶಿಕ್ಷಕಿ) ವಿದ್ಯಾ, ಪೀಕಿ ಚೌಧರಿ, ಸಂಸ್ಕೃತಿ ಪಾಟೀಲ, ವೇದಿಕಾ ಬಡಚಿ, ರಸಿಕಾ ಮಾನೆ (ಪ್ರಾದೇಶಿಕ ಮಟ್ಟದ ವಿಜ್ಞಾನ ಶಿಕ್ಷಕಿ) ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.