ಬೆಳಗಾವಿ : ಗೋಕಾಕ ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೆಡಿಟ್ ಬ್ಯಾಂಕಿನಲ್ಲಿ ₹74.87 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಬ್ಯಾಂಕಿನ 14 ಸಿಬ್ಬಂದಿ ವಿರುದ್ಧ ಅಧ್ಯಕ್ಷ ಜಿತೇಂದ್ರ ಬಾಳಾಸಾಹೇಬ ಮಾಂಗಳೇಕರ ಶಹರ ಪೊಲೀಸರಿಗೆ ದೂರು ನೀಡಿದ್ದಾರೆ.
ಗೊಂದಲದ ಕಾರಣ ತಮ್ಮ ಠೇವಣಿ ಮೊತ್ತ ವಾಪಸ್ ನೀಡುವಂತೆ ಜನ ಅಪಾರ ಸಂಖ್ಯೆಯಲ್ಲಿ ಬ್ಯಾಂಕ್ ಎದುರು ಜಮಾಯಿಸಿದರು. ಕೆಲಕಾಲ ದ್ವೇಷಮಯ ವಾತಾವರಣ ಉಂಟಾಯಿತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದರು.
ಸಾಗರ ಹನಮಂತ ಸಬಕಾಳೆ, ವಿಶ್ವನಾಥ ಅಶೋಕ ಬಾಗಡೆ, ಸಂಭಾಜಿ ಮಲ್ಲಪ್ಪ ಘೋರ್ಪಡೆ, ಸಿದ್ದಪ್ಪ ಸದಾಶಿವ ಪವಾರ (ವ್ಯವಸ್ಥಾಪಕ), ದಯಾನಂದ ಶಿವಾಜಿ ಉಪ್ಪಿನ, ಸಂಜನಾ ಸಾಗರ ಸಬಕಾಳೆ, ಮಾಲವ್ವ ಹಣಮಂತ ಸಬಕಾಲೆ, ಗೌರವ್ವ ಬಾಳಪ್ಪ ಹವಾಲ್ದಾರ, ಚಂದ್ರವ್ವ ಹವಾಲ್ದಾರ, ಮಾಯವ್ವ ಮಾಯಪ್ಪ ಜಾಧವ, ಪರಸಪ್ಪ ಯಲ್ಲಪ್ಪ ಮಾಲೋಜಿ, ರಾಧಾ ಪರಸಪ್ಪ ಮಾಲೋಜಿ, ಸಂದೀಪ ಬಸವರಾಜ ಮರಾಠ ಮತ್ತು ಕಿರಣ ಸಕಾರಾಮ ಸುಪಲಿ ಮತ್ತಿತರರ ವಿರುದ್ಧ ದೂರು ದಾಖಲಾಗಿದೆ.