ಪುತ್ತೂರು: ಜೇನು ಕೃಷಿ ಕಲಿಸುತ್ತೇನೆಂದು ಬೆಳಗಾವಿ ಮೂಲದ ಅಪ್ರಾಪ್ತ ಬಾಲಕಿಯನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ ವ್ಯಕ್ತಿಯೊಬ್ಬ ತರಬೇತಿ ಹೆಸರಿನಲ್ಲಿ 17 ದಿನಗಳ ಕಾಲ ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದು, ಹೆತ್ತವರ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೋಕೋ ಕಾಯ್ದೆಯಡಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಅಬ್ದುಲ್ ಗಫೂರ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಳಗಾವಿ ಮೂಲದ ಕುಟುಂಬ ಅಪ್ರಾಪ್ತ ಪ್ರಾಯದ ಮಗಳೊಂದಿಗೆ ಕೆಲಸದ ನಿಮಿತ್ತ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದಾರೆ. ಇದೇ ವೇಳೆ ಪರಿಚಯ ಆಗಿದ್ದ ಆರೋಪಿ ಅಬ್ದುಲ್ ಗಫೂರ್, ತಾನು ಬಾಲಕಿಗೆ ಜೇನು ಕೃಷಿ ಕಲಿಸುತ್ತೇನೆಂದು ಹೇಳಿದ್ದು, ಅದರಂತೆ ತಾಯಿ ತನ್ನ ಮಗಳನ್ನು ಎರಡು ತಿಂಗಳಿಂದ ಆರೋಪಿ ಮನೆಯಲ್ಲಿ ಬಿಟ್ಟಿದ್ದರು.
ಈ ವೇಳೆ, ಬಾಲಕಿಯ ಹೆತ್ತವರು ಊರಿಗೆ ತೆರಳಿದ್ದು ಡಿ.19ರಂದು ಹಿಂತಿರುಗಿ ಬಂದಿದ್ದರು. ಈ ವೇಳೆ ಬಾಲಕಿ ಅಳುತ್ತಾ ಬಂದು ಡಿ.2ರಿಂದ ತೊಡಗಿ ಆರೋಪಿ ನಿರಂತರ ಅತ್ಯಾಚಾರ ಮಾಡಿರುವುದಾಗಿ ತಿಳಿಸಿರುತ್ತಾಳೆ. ಈ ಬಗ್ಗೆ ಬಾಲಕಿ ತಾಯಿ ನೀಡಿದ ದೂರಿನಂತೆ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.


