ಸರಕಾರಿ ಶಾಲೆಯ ಶಿಕ್ಷಕರಾಗಿದ್ದ ಕಲ್ಲಪ್ಪ ಗಾಣಿಗೇರ ಅವರು ನಿಡಗುಂದಿ ಗ್ರಾಮದ ಹುಕ್ಕೇರಿ ತೋಟದ ಮಗದುಮ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ರವಿವಾರ ಮಧ್ಯಾಹ್ನ ಸುಮಾರಿಗೆ
ಈಜಲು ಹೋದ ಸಂದರ್ಭದಲ್ಲಿ ಈ ಮೂವರು ಮೃತಪಟ್ಟ ಘಟನೆ ಸಂಭವಿಸಿದೆ.
ಬೆಳಗಾವಿ : ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ರವಿವಾರ ಕೃಷಿ ಹೊಂಡದ ನೀರಿನಲ್ಲಿ ಮುಳುಗಿ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ನಡೆದಿದೆ.
ಕಲ್ಲಪ್ಪ ಬಸಪ್ಪ ಗಾಣಿಗೇರ-36 ಮತ್ತು ಮಕ್ಕಳಾದ ಮನೋಜ್ ಕಲ್ಲಪ್ಪ ಗಾಣಿಗೇರ-11 ಮತ್ತು ಮದನ ಕಲ್ಪಪ್ಪ ಗಾಣಿಗೇರ-9 ಮೃತಪಟ್ಟವರು. ಮೇತ್ರಿ ಎಂಬವರ ಜಮೀನಿನಲ್ಲಿ ಕೃಷಿ ಹೊಂಡ ಇದೆ. ಮಕ್ಕಳಿಗೆ ಈಜು ಕಲಿಸಲು ಹೋದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದ್ದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈಜು ಕಲಿಯುವಾಗ ದುರ್ಘಟನೆ : ಕೃಷಿ ಹೊಂಡದ ನೀರಿನಲ್ಲಿ ಮುಳುಗಿ ತಂದೆ-ಮಕ್ಕಳು ದುರ್ಮರಣ
