ಬೆಳಗಾವಿ :
ಉಚಗಾವಿಯಲ್ಲಿ ತಾಯಿ ಮತ್ತು ಮಗಳು ಬಾವಿಗೆ ಬಿದ್ದಿದ್ದು, ದುರ್ಘಟನೆಯಲ್ಲಿ ತಾಯಿ ಮೃತಪಟ್ಟಿದ್ದಾರೆ. ಮಗಳನ್ನು ರಕ್ಷಿಸಲಾಗಿದೆ.
ಬುಧವಾರ ಮಧ್ಯಾಹ್ನದ ಸುಮಾರಿಗೆ ಈ ಘಟನೆ ನಡೆದಿದೆ.
ಉಚಗಾವಿ ಚವಾಟಗಲ್ಲಿ ಪ್ರಿಯಾಂಕಾ ಮನೋಹರ ಪಾವಶೆ(40 )ಎಂದು ಗುರುತಿಸಲಾಗಿದೆ. ಬಾಲಕಿ ಅಕ್ಷರಾ ಮನೋಹರ ಪಾವಶೆ (13 ).
ಹಿತ್ತಲಿನಲ್ಲಿ ಹೋಗುವ ಮಾರ್ಗದಲ್ಲಿದ್ದ ಬಾವಿಗೆ ಬಿದ್ದು ಈ ಘಟನೆ ನಡೆದಿದೆ.
45 ಅಡಿ ಆಳದ ಬಾವಿಗೆ ಇಬ್ಬರು ಬಿದ್ದಿದ್ದಾರೆ. ಬಾವಿಗೆ ಬಿದ್ದ ರಭಸಕ್ಕೆ ಪ್ರಿಯಾಂಕಾ ಅವರ ತಲೆಗೆ ಬಲವಾದ ಪೆಟ್ಟು ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆದರೆ ಮಗಳು ಅಕ್ಷರಾ ಬಾವಿಗೆ ಬಿದ್ದ ತಕ್ಷಣ ಹಗ್ಗವನ್ನು ಬಿಗಿಯಾಗಿ ಹಿಡಿದು ಕೂಗಿದ್ದರಿಂದ ಸುತ್ತಲಿನ ಜನ ಓಡಿಬಂದು ರಕ್ಷಿಸಿದ್ದಾರೆ. ಪ್ರಿಯಾಂಕಾ ಗೋಡಂಬಿ ಕಾರ್ಖಾನೆಯ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಬುಧವಾರ ಕೆಲಸಕ್ಕೆ ಹೋಗಿರಲಿಲ್ಲ. ಮಗಳು ಅಕ್ಷರಾ ಏಳನೇ ತರಗತಿಯಲ್ಲಿ ಓದುತ್ತಿದ್ದು ಆಕೆಯೂ ಸಹಾ ಬುಧವಾರ ಶಾಲೆಗೆ ಹೋಗಿರಲಿಲ್ಲ.