ಬೆಳಗಾವಿ :
ಜಿಲ್ಲೆಯಲ್ಲಿ ರಾಷ್ಟೀಯ ಅಂಚೆ ಸಪ್ತಾಹದ ಅಂಗವಾಗಿ ಭಾರತೀಯ ಅಂಚೆ ಇಲಾಖೆ, ಅಂಚೆ ಅಧೀಕ್ಷಕರ ಕಚೇರಿ, ಬೆಳಗಾವಿ ಅಂಚೆ ವಿಭಾಗ ಇವರ ಆಶ್ರಯದಲ್ಲಿ ಜಿಲ್ಲೆಯ ವಿವಿಧ ತಾಲೂಕಗಳಲ್ಲಿ ಅ.೯. ೨೦೨೩ ರಿಂದ ಅ.೧೩ ೨೦೨೩ ರ ವರಗೆ ಆಧಾರ್ ನೋಂದಣಿ, ನವೀಕರಣ, ತಿದ್ದುಪಡಿ ಮೇಳವನ್ನು ಆಯೋಜಿಸಲಾಗಿದೆ.
ಬೆಳಗಾವಿ ಪ್ರಧಾನ ಅಂಚೆ ಕಚೇರಿ, ಬೈಲಹೊಂಗಲ ಪ್ರಧಾನ ಅಂಚೆ ಕಚೇರಿ, ರಾಮದುರ್ಗ ಪ್ರಧಾನ ಅಂಚೆ ಕಚೇರಿ, ಟಿಳಕವಾಡಿ ಅಂಚೆ ಕಚೇರಿ, ಖಾನಾಪುರ ಅಂಚೆ ಕಚೇರಿ, ಸವದತ್ತಿ ಅಂಚೆ ಕಚೇರಿ, ಶಿವಾಜಿ ನಗರ ಅಂಚೆ ಕಚೇರಿ ಹಾಗೂ ನೆಹರುನಗರ ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ, ನವೀಕರಣ, ತಿದ್ದುಪಡಿ ಮೇಳ ಕಾರ್ಯಕ್ರಮ ನಡೆಯಲಿದೆ ಎಂದು ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.