ಕಡಪಾ :
ಕ್ರಿಕೆಟ್ನಲ್ಲಿ ಆಟಗಾರ ಒಂದು ಓವರ್ನಲ್ಲಿ ಬರೋಬ್ಬರಿ ಆರು ಸಿಕ್ಸರ್ಗಳನ್ನು ಬಾರಿಸಿ ದಾಖಲೆ ಮಾಡಿದ್ದಾರೆ. ಕರ್ನಲ್ CK ನಾಯುಡು ಟ್ರೋಫಿಯು U-23 ಕ್ರಿಕೆಟ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ವಂಶಿ ಕೃಷ್ಣ ಎಂಬ ಆಟಗಾರ ಈ ಸಾಧನೆ ಮಾಡಿದ್ದಾರೆ.
ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ದಂತಕಥೆ ಸರ್ ಗ್ಯಾರಿ ಸೋಬರ್ಸ್ 1968 ರಲ್ಲಿ ನಾಟಿಂಗ್ಹ್ಯಾಮ್ಶೈರ್ಗಾಗಿ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಆಡುವಾಗ, ಗಾರ್ಫೀಲ್ಡ್ ಸೋಬರ್ಸ್ ಗ್ಲಾಮೊರ್ಗಾನ್ನ ಮಾಲ್ಕಮ್ ನ್ಯಾಶ್ ಅವರನ್ನು ಓವರ್ನಲ್ಲಿ ಆರು ಸಿಕ್ಸರ್ಗಳಿಗೆ ಹೊಡೆಯುವ ಮೂಲಕ ಒಂದೇ ಓವರ್ನಲ್ಲಿ ಆರು ಸಿಕ್ಸರ್ ಹೊಡೆದ ಮೊದಲ ಆಟಗಾರ ಎನಿಸಿಕೊಂಡರು. ನಂತರ ರವಿಶಾಸ್ತ್ರಿ ಬರೋಡಾ ವಿರುದ್ಧ ಬಾಂಬೆ ಪರ 1985 ರಲ್ಲಿ ಒಂದು ಓವರ್ನಲ್ಲಿ ಆರು ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದು ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್ಮನ್ ಹರ್ಷಲ್ ಗಿಬ್ಸ್ ಆಗಿದ್ದಾರೆ. 2007 ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ ಅವರ ವಿರುದ್ಧ ಯುವರಾಜ್ ಸಿಂಗ್ ಬಾರಿಸಿದ ಆರು ಸಿಕ್ಸರ್ಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇದೀಗ ಆ ಪಟ್ಟಿಗೆ ಆಂಧ್ರಪ್ರದೇಶದ ವಂಶಿ ಕೃಷ್ಣ ಸೇರ್ಪಡೆಯಾಗಿದ್ದಾರೆ. ಅವರು ಕರ್ನಲ್ ಸಿಕೆ ನಾಯುಡು ಟ್ರೋಫಿ ಪಂದ್ಯದಲ್ಲಿ ರೈಲ್ವೆ ತಂಡದ ವಿರುದ್ಧ ಈ ಸಾಧನೆ ಮಾಡಿದ್ದಾರೆ.
ಕರ್ನಲ್ ಸಿ.ಕೆ. ನಾಯುಡು ಟ್ರೋಫಿಯು U-23 ಕ್ರಿಕೆಟಿಗರಿಗೆ ರಾಷ್ಟ್ರೀಯ ಪಂದ್ಯಾವಳಿಯಾಗಿದೆ. ಕಡಪಾದಲ್ಲಿ ನಡೆದ ಕರ್ನಲ್ ಸಿ.ಕೆ. ನಾಯುಡು ಟ್ರೋಫಿಯಲ್ಲಿ ಆಂಧ್ರಪ್ರದೇಶ ತಂಡದ ವಂಶಿ ಕೃಷ್ಣ ಅವರು ರೈಲ್ವೇಸ್ ಸ್ಪಿನ್ನರ್ ದಮನ್ದೀಪ್ ಸಿಂಗ್ ಅವರ ಒಂದು ಓವರ್ನ ಆರು ಎಸೆತಗಳಲ್ಲಿ ಆರು ಭರ್ಜರಿ ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ವಂಶಿ ಕೃಷ್ಣ ಅವರು ಕೇವಲ 64 ಎಸೆತಗಳಲ್ಲಿ 110 ರನ್ಗಳ ಸಿಡಿಲಬ್ಬರದ ಶತಕ ಬಾರಿಸಿದ್ದಾರೆ. ಬಿಸಿಸಿಐ ಎಕ್ಸ್ನಲ್ಲಿ ವೀಡಿಯೊ ಹಂಚಿಕೊಂಡಿದೆ.