ಗದಗ :
ಮುಂಡರಗಿ ತಾಲೂಕು ಡಂಬಳ ಗ್ರಾಮದ ಯುವಕನೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡ ಬಗ್ಗೆ ಪತ್ರ ಬರೆದು ಗಮನಸೆಳೆದಿದ್ದಾನೆ.
ನನಗೆ ಕನ್ಯೆ ಹುಡುಕಿ ಹುಡುಕಿ ಸಾಕಾಗಿದೆ. ಕನ್ಯೆಯನ್ನು ಹುಡುಕಿ ಕೊಡಿ ಎಂದು ಗ್ರಾಮ ಪಂಚಾಯಿತಿಗೆ ಪತ್ರ ಬರೆದಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮುತ್ತು ಹೂಗಾರ (27)ಕಳೆದ ಏಳು ವರ್ಷದಿಂದ ಕನ್ಯೆ ಅನ್ವೇಷಣೆ ನಡೆಸುತ್ತಿದ್ದಾನೆ. ಹೂಗಾರ ಸಮುದಾಯದ ಈತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದು ಕುಟುಂಬ ನಿರ್ವಹಣೆ ಮಾಡುವಷ್ಟು ಹಣ ಸಂಪಾದನೆ ಇದೆ. ತಂದೆ- ತಾಯಿಗೆ ಒಬ್ಬನೇ ಮಗ. ಇದುವರೆಗೆ ಕನ್ಯೆ ಸಿಕ್ಕಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆ ಬಂದಿದೆ ಎಂದು ಪತ್ರದಲ್ಲಿ ತಿಳಿಸಿದ್ದು ಪತ್ರ ಸ್ವೀಕರಿಸಿರುವ ಪಿಡಿಒ ಅನಿಲ್ ಗೌಡ ಅವರು ಕನ್ಯೆ ಹುಡುಕುವುದು ಸುಲಭವಲ್ಲ, ಶುಭವಾಗಲಿ ಎಂದು ಹೇಳಿ ಕಳಿಸಿದ್ದೇನೆ ಎಂದಿದ್ದಾರೆ.