ಕೇದನೂರ ಯೋಧನಿಂದ ಹಲ್ಲೆಗೋಳಗಾಗಿದ್ದ ಯುವಕ ಸಾವು..!
ಇಬ್ಬರು ಪುಂಡರ ಜಗಳಕ್ಕೆ ಬಲಿಯಾದ ಚಿಗುರು ಮೀಸೆ ಯುವಕ.
ಯೋಧನ ಮಗನಿಗೂ ತಟ್ಟಿದ ಕೊಲೆ ಕಳಂಕ..!
ಬೆಳಗಾವಿ : ಕೇದನೂರ ಗ್ರಾಮದಲ್ಲಿ ಇತ್ತೀಚೆಗೆ ಯೋಧನಿಂದ ಮಾರಕಾಸ್ರ್ತಗಳಿಂದ ಹಲ್ಲೆಗೋಳಗಾಗಿದ್ದ ಚಿಗುರು ಮೀಸೆಯ 21 ವರ್ಷದ ಯುವಕ ಹಾಗೂ ಉರಗ ಪ್ರೇಮಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಇಬ್ಬರ ಜಗಳಕ್ಕೆ ಬಲಿಯಾದ ದಿನೇಶ್ ..?
ದಿನೇಶ್ ಚಿಗುರು ಮೀಸೆ ಯುವಕ ಹಾಗೂ ಉರಗ ಪ್ರೇಮಿ. ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಸರಿಸೃಪಗಳನ್ನು ಕಂಡು ಜನರು ಭಯಭೀತಗೊಂಡ ತಕ್ಷಣ ಅಲ್ಲಿಗೆ ಹೋಗಿ ಅವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಪ್ರಾಣ ಉಳಿಸುತ್ತಿದ್ದ. ಆದರೆ ಅತನ ಪ್ರಾಣ ಮಾತ್ರ ಇಬ್ಬರ ಪುಂಡರ ಜಗಳದಲ್ಲಿ ಬಲಿಯಾಗಿದ್ದು ವಿಪರ್ಯಾಸವೆಂದರೆ ತಪ್ಪಾಗಲಾರದು.
ಅಂದು ಆಗಿದ್ದೇನು..?
ಅಂದು ಯೋಧ ಸಂಭಾಜೀ ತನ್ನ ಗೆಳೆಯನೊಂದಿಗೆ ಸಂಭಾಷಣೆ ಮಾಡುವ ಸಂದರ್ಭದಲ್ಲಿ ಗುತ್ತಿಗೆದಾರ ಚಾಳೋಬಾ ಲಾಡ ಎಂಬುವನನ್ನು ಟೀಕಿಸುತ್ತ, ಅವನ ಪತ್ನಿ ಹಾಗೂ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅಶ್ಲೀಲವಾಗಿ ಬೈದಿದ್ದ. ಈ ವಿಷಯ ಕಿವಿಗೆ ಬಿದ್ದ ತಕ್ಷಣ ಚಾಳೂಬಾ ಯೋಧನನ್ನು ಕೇಳಲು ಚಿಗುರು ಮೀಸೆಯ ಯುವಕರನ್ನು ಪುಸಲಾಯಿಸಿ ಅವನ ಮನೆಗೆ ಕರೆದುಕೊಂಡು ಹೋಗಿದ್ದ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮೀಲಾಯಿಸುವ ಹಂತ ತಲುಪಿದಾಗ ಏತನ್ಮಧ್ಯೆ ಅವನ ಮಗ ಮತ್ತು ತಾಯಿ ಸೇರಿಕೊಂಡು ಬಡಿಗೆಗಳಿಂದ ಪಿರ್ಯಾದಿ ಚಾಳೂಬಾ ಲಾಡ್ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದರು. ಅಷ್ಟರಲ್ಲಿ ಜಗಳ ನೋಡಿ ಬಿಡಿಸಲು ಬಂದಿದ್ದ ದಿನೇಶ್ ಶಾಪೂರಕರ, ರಾಹುಲ್ ರಾಜಾಯಿ, ಚೇತನ ಸಂಭಾಜೀ,ಪವನ ಕಣಬರಕರ ಎಂಬುವರು ಯೋಧನ ಮೇಲೆ ಪ್ರತಿಯಾಗಿ ಹಲ್ಲೆಮಾಡುವ ಸಂದರ್ಭದಲ್ಲಿ ಯೋಧ ಕೂಡಗೋಲಿನಿಂದ ಇವರ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ದಿನೇಶ್ ಶಾಪೂರಕರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ, ಮೊನ್ನೆ (26 ಮಾರ್ಚ್ ) ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಅಂದು ಘಟನೆ ಸುದ್ದಿ ತಿಳಿದು ತಕ್ಷಣ ಕಾಕತಿ PI ಉಮೇಶ್, PSI ರವಿ ಹಾಗೂ ಸಿಬ್ಬಂದಿ ಪ್ರಕಾಶ ಬಲ್ಲಾಳ, ದೊಡಮನಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿ ಆರೋಪಿಯನ್ನು ವಶಕ್ಕೆ ಪಡೆಯಲು ಹೋದಾಗ ಯೋಧ ನಾನು ಯೋಧ ಅಂತಾ ಹೇಳಿ ಅವಾಜ ಹಾಕಿದ್ದಲ್ಲದೇ, ತನ್ನ ರಕ್ಷಣೆ ಮಾಡಿಕೊಳ್ಳಲು ಮನೆ ಹೆಣ್ಣುಮಕ್ಕಳನ್ನು ಮುಂದೆಬಿಟ್ಟಿದ್ದಲೇ ಅವರ ಕೈಗೆ ಚಾಕು ಕೊಟ್ಟು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದರು.
ಆಗ PSI ರವಿ , ಬಲ್ಲಾಳ, ದೊಡಮನಿ ಯೋಧನನ್ನು ಕಾನೂನಿನ ಚೌಕಟ್ಟಿನಲ್ಲಿ ಮೆತ್ತಗೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಮೂವರು ಆರೋಪಿಗಳ ವಿರುದ್ಧ IPC ಕಲಂ 307, 504, 506, 523,524 ಹಾಗೂ 34 ನಿಯಮದಡಿ ಪ್ರಕರಣ ದಾಖಲಾಗಿತ್ತು. ತಾಯಿ ಅನಾರೋಗ್ಯ ನೇಪ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಳು. ಹೀಗಾಗಿ , ಯೋಧ ಗೋಪಾಳ ಸಂಭಾಜಿ (45)ಹಾಗೂ ಮಗ ಅನುರಾಗ ಸಂಭಾಜೀ (19)
ಇಬ್ಬರು ಹಿಂಡಲಗಾ ಜೈಲು ಸೇರಿ ಜಾಮೀನಿನ ಮೇಲೆ ಬರಲು ಶತಾಯ ಗತಾಯ ಪ್ರಯತ್ನ ನಡೆಸಿದ್ದರು. ಆದರೆ ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ಅಸುನೀಗಿದ್ದು IPC 302 ಅಡಿಯಲ್ಲಿ ತಿಂಗಳುಗಟ್ಟಲೆ ಜೈಲೇ ಗತಿಯಾಗಿದೆ.
ಯೋಧನ ಮಗನಿಗೂ ತಟ್ಟಿದ ಕೊಲೆ ಕಳಂಕ..!
ಯೋಧ ಗೋಪಾಳ 19 ವರ್ಷದ ಮಗ ಅನುರಾಗ BCA ಪದವಿ ಪಡಯುತ್ತಿದ್ದು, ಅಂದು ರಾತ್ರಿ ಆ ಜಗಳದಲ್ಲಿ ಭಾಗಿಯಾಗಿದ್ದರಿಂದ ಇಂದು ಜೈಲು ಪಾಲಾಗಿದ್ದಾನೆ. ತಂದೆಯೊಂದಿಗೆ ಆತನಿಗೂ ಕೊಲೆ ಕಳಂಕ ತಟ್ಟಿದೆ. ಉತ್ತಮ ವಿಧ್ಯಾಭ್ಯಾಸ ಕಲಿತು ಉನ್ನತ ಸ್ಥಾನಕ್ಕೆರಬೇಕಾಗಿದ್ದ ಯುವಕನ ಭವಿಷ್ಯಕ್ಕೆ ಪುಂಡರ ಜಗಳ ಶಾಪವಾಗಿದೆ.
ಯೋಧನಿಂದ ಬೇಸತ್ತಿದ್ದ ಜನ..?
ಈ ಯೋಧ ರಜೆ ಮೇಲೆ ಬಂದಾಗಲೆಲ್ಲಾ ಮಾಡುವ ರಂಪಾಟದಿಂದ ಗ್ರಾಮದಲ್ಲಿ ರಾತ್ರಿಯಿಡೀ ನಡೆಯುವ ಹೈಡ್ರಾಮಾ ಗೆ ಕೇದನೂರ ಗ್ರಾಮಸ್ಥರು ಬೇಸತ್ತು ಹೋಗಿದ್ದರು. ಈಗ ಯೋಧ ಜೈಲು ಸೇರಿದ್ದರಿಂದ ಗ್ರಾಮದಲ್ಲಿ ಶಾಂತಿ ವಾತಾವರಣ ನೆಲಸಲಿ ಎನ್ನುತ್ತಿದ್ದಾರೆ ಕೇದನೂರ ಜನ.
ಘಟನೆ ಸಂಭವಿಸಿದ ದಿನ ಸ್ಥಳಕ್ಕೆ ನೂತನ ಕಮೀಷನರ್ ಇಡಾ ಮಾರ್ಟೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಡಿಸಿಪಿ ರೋಹನ್ ಜಗದೀಶ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರನ್ನು ಭೇಟಿ ಮಾಡಿ ಗ್ರಾಮದಲ್ಲಿ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾಗಿದ್ದರು.
ಕಾಕತಿ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಬಂಧಿತನಾಗಿದ್ದ. ಈಗ ಯುವಕನ ಸಾವಿನಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ್ದು, ಒಂದು ವೇಳೆ ಆರೋಪಿ ಬಂಧಿತನಾಗದಿದ್ದರೆ, ಗ್ರಾಮದಲ್ಲಿ ಭಾರಿ ಅನಾಹುತಗಳು ನಡೆಯುವ ಸಂಭವವಿತ್ತು ಎಂದು ತಿಳಿದು ಬಂದಿದೆ.
ಕಾಕತಿ ಪೊಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.