ಬೆಳಗಾವಿ :
ಬೆಳಗಾವಿಯಲ್ಲಿ ತಲ್ವಾರ ನಿಂದ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಬೆಳಗಾವಿಯ ಕಸಾಯಿ ಗಲ್ಲಿಯಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು ಘಟನೆಯಲ್ಲಿ ನ್ಯೂ ಗಾಂಧಿನಗರದ ನಿವಾಸಿ ರೇಹಾನ್ ಅಸ್ಲಮ್ ಮುಜಾವರ್ ಎಂಬಾತ ಹಲ್ಲೆಗೊಳಗಾಗಿದ್ದಾನೆ.
ಕೌಡಿಫೀರ್ (ಸಣ್ಣಮಕ್ಕಳ) ಮೊಹರಂ ಮೆರವಣಿಗೆ ಬಳಿಕ ತಲ್ವಾರ್ ನಿಂದ ಹಲ್ಲೆಯಾದ ಆರೋಪ ಕೇಳಿ ಬಂದಿದೆ. ಮೊಹರಂ ಹಬ್ಬದ ಆಚರಣೆ ಬಳಿಕ ಸಣ್ಣ ಮಕ್ಕಳ ಕೌಡಿಫೀರ್ ನಡೆಯುತ್ತೆ ಈ ಆಚರಣೆಯ ವೇಳೆ ಘಟನೆ ನಡೆದಿದೆ. ಮರೆವಣಿಗೆ ಮುಗಿಸಿ ರಸ್ತೆ ಪಕ್ಕ ನಿಂತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಸುಮಾರು 20ಕ್ಕೂ ಹೆಚ್ಚು ಯುವಕರು ರೇಹಾನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಹಲ್ಲೆಯು ಹಳೆಯ ದ್ವೇಷದ ಹಿನ್ನೆಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದ್ದು ಗಾಯಾಳು ರೇಹಾನ್ ಬೆನ್ನು ತಲೆಗೆ ಗಂಭೀರ ಗಾಯಗಳಾಗಿವೆ ಸಧ್ಯ ಗಾಯಾಳು ರೇಹಾನ್ ನನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭೂಷನ್ ಬೋರಸೆ ಹಾಗೂ ಡಿಸಿಪಿ ನಾರಾಯಣ ಭರಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಾರ್ಕೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.