ಬೆಳಗಾವಿ : ಯಮಕನಮರಡಿಯ ಖ್ಯಾತ ದಂತ ವೈದ್ಯರೊಬ್ಬರು ನೇಣಿಗೆ ಕೊರಳೊಡ್ಡಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಶಂಕರ ಕುಡಚಿ, ಸಾ: ಹತ್ತರಗಿ(38) ಎಂಬ ಖ್ಯಾತ ದಂತ ವೈದ್ಯರು ತಮ್ಮ ಮನೆಯಲ್ಲೇ ಮಂಗಳವಾರದಂದು ನೇಣಿಗೆ ಶರಣಾಗಿದ್ದಾರೆ. ಅವರಿಗೆ ಧರ್ಮ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ.
ನೇಣು ಹಾಕಿಕೊಳ್ಳಲು ಏನು ಕಾರಣ ಎನ್ನುವುದು ತಿಳಿದು ಬಂದಿಲ್ಲ. ಯಮಕನಮರಡಿ ಸಿಪಿಐ ಮುಶಾಪುರಿ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.