ಬೆಳಗಾವಿ : ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಹತ್ತಿರ ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಕಾರಿಗೆ ಡಿಕ್ಕಿ ಹೊಡೆದ ಘಟನೆ ಶನಿವಾರ ಮಧ್ಯಾಹ್ನ ನಡೆದಿರುವ ಬಗ್ಗೆ ವರದಿಯಾಗಿದೆ.
ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಮಹಿಳೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಕಾರು ಚಾಲಕನಿಗೆ ಗಂಭೀರವಾದ ಗಾಯಗಳಾಗಿವೆ.
ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಕಾರು ಚಾಲಕ ಓವರ್ ಟೇಕ್ ಮಾಡುವಾಗ ಎದುರಿಗೆ ಇದ್ದ ರಾಜ್ಯ ಸಾರಿಗೆ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಹೆಸ್ಕಾಂ ಚಿಕ್ಕೋಡಿ ಉಪವಿಭಾಗ ಸಹಾಯಕ ಅಭಿಯಂತ ನೇಮಿನಾಥ ಅವಟೆ ಅವರ ಕಾರು ಎಂದು ಹೇಳಲಾಗುತ್ತಿದೆ. ಕಾರಿನ ಎರಡು ಏರ್ ಬ್ಯಾಗ್ ಗಳು ಅದೃಷ್ಟವಶಾತ್ ಓಪನ್ ಆಗಿದ್ದರಿಂದ ಕಾರಿನಲ್ಲಿದ್ದ ಹೆಸ್ಕಾಂ ಇಂಜಿನಿಯರ್ ಬದುಕುಳಿದಿದ್ದಾರೆ.
ಡಿಕ್ಕಿ ಹೊಡೆದ ರಬ್ಬಸಕ್ಕೆ 20 ಕಾರಿನ ಮುಂಭಾಗ ನುಜ್ಜು ಗುಜ್ಜಾಗಿದೆ.
ಅಪಘಾತದಲ್ಲಿ ಕಾರಿನಲ್ಲಿದ ನಾಲ್ವರಲ್ಲಿ ಮಹಿಳೆಯೋರ್ವಳು (60) ಸಾವಿಗೀಡಾಗಿದ್ದರೇ, ಓರ್ವನ ಸ್ಥಿತಿ (Serious) ಗಂಭೀರವಾಗಿದೆ. ಉಳಿದಿಬ್ಬರಿಗು ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಸಮೀಪದ ಚಿಕ್ಕೋಡಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಬಸ್ಸಿನಲ್ಲಿದ್ದ ಕೆಲ ಮಹಿಳೆ ಮಕ್ಕಳಿಗೂ ಸಣ್ಣ ಪುಟ್ಟ ಗಾಯಾವಾದ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಅಪಘಾತವಾದ ಬಸ್ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದಿಂದ ಚಿಕ್ಕೋಡಿಗೆ ಹೋಗುತ್ತಿತ್ತು, ಕಾರು ಚಿಕ್ಕೋಡಿಯಿಂದ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.
ಘಟನೆ ಚಿಕ್ಕೋಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.