This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಸಾಹಿತ್ಯ ಸಮ್ಮೇಳನದಲ್ಲಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಆತ್ಮೀಯ ಸನ್ಮಾನ A warm tribute to Subrahmanya Hebbagilu at the Sahitya Sammelan


 

ಹಾವೇರಿ :
ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊರನಾಡಿನಲ್ಲಿ ಕನ್ನಡ ಸೇವೆ ಸಲ್ಲಿಸುತ್ತಿರುವ ಅನಿವಾಸಿ ಭಾರತೀಯ ಸುಬ್ರಮಣ್ಯ ಹೆಬ್ಬಾಗಿಲು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಮೂಲತಃ ಕುಂದಾಪುರ ತಾಲೂಕಿನ ಬೈಂದೂರಿನವರು. ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೆ ಕರ್ನಾಟಕದಲ್ಲಿ ಪೂರ್ಣಗೊಳಿಸಿ ವೃತ್ತಿಯನ್ನು ಅರಸಿ ಕತಾರ್ ಗೆ 2007 ನೇ ಇಸವಿಯಲ್ಲಿ ಪಯಣ ಬೆಳೆಸಿದರು. ಕತಾರಿನಲ್ಲಿ ಯಶಸ್ವಿಯಾಗಿ ಹಲವಾರು ಕೆಲಸಗಳಲ್ಲಿ ತಮ್ಮ ನೈಪುಣ್ಯತೆಯನ್ನು ತೋರಿಸಿರುವರು.
ಹೊಸತರಲ್ಲಿ ಕೆಲಸ ಹಾಗೂ ಮನೆ ಎಂದು ಕಳೆದ ದಿನಗಳು ಕೆಲವು ಮಾತ್ರ ಕಾಲಕ್ರಮೇಣ ಕರ್ನಾಟಕ ಸಂಘ ಕತಾರ್ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಪರ ಒಳಿತಿಗಾಗಿ ಅಂಕಗಳನ್ನು ಹಾಕಲು ಪ್ರಾರಂಭಿಸಿದರು.

ಸಂಸ್ಥಾಪಕರ ಮಾರ್ಗದರ್ಶನ ಹಾಗೂ ಸಲಹೆ ಅವರ ಬೆಳವಣಿಗೆಗೆ ಪೂರಕವಾಯಿತು. ನಂತರದ ದಿನಗಳಲ್ಲಿ ಕರ್ನಾಟಕ ಸಂಘ ಕತಾರ್ ನ ಆಡಳಿತ ಸಮಿತಿಯ ಸದಸ್ಯರಾಗಿ ಉಪಾಧ್ಯಕ್ಷರಾಗಿ, ಸದಸ್ಯತ್ವ ಸಂಚಾಲಕರಾಗಿ, ಸಂಘ ಬೆಳೆಯಲು ಹಾಗೂ ಅದರ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವುದರ ಜೊತೆಗೆ ಸೇವೆ ಸಲ್ಲಿಸಿದರು.

ಪರಿಸರ ದಿನಾಚರಣೆಯಲ್ಲಿ ಸಸಿ ನೆಡುವುದು, ವಸಂತೋತ್ಸವ ದಲ್ಲಿ ವೇದಿಕೆ ಸಜ್ಜುಗೊಳಿಸುವುದು, ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರಾಯೋಜಕರನ್ನು ಪ್ರೇರೇಪಿಸುವುದು, ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವುದು, ನಾಟಕದಲ್ಲಿ ಪಾತ್ರ ವಹಿಸುವುದು ಹೀಗೆ ಅನೇಕಾನೇಕ ಸನ್ನಿವೇಶಗಳಲ್ಲಿ ವಿಭಿನ್ನ ಸಂದರ್ಭಗಳಲ್ಲಿ ಸುಬ್ರಹ್ಮಣ್ಯ ಅವರು ಯಾವ ಕೆಲಸ ಎಷ್ಟು ಪ್ರಮುಖ ಎಂದು ಆಲೋಚಿಸದೆ ಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಇಲ್ಲದೆ ಮುನ್ನುಗ್ಗಿ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಇದೇ ಹುಮ್ಮಸ್ಸು ಹುರುಪು ಅವರ ನೇರ ನಡೆಯನ್ನು ಎತ್ತರದ ಶಿಖರಗಳ ಕಡೆಗೆ ಸಾಗಲು ಸಹಕರಿಸಿದ್ದು ರಾಜ್ಯಮಟ್ಟದ ರಾಷ್ಟ್ರಮಟ್ಟದಲ್ಲಿ ಐಸಿಬಿ ಎಫ್ ಭಾರತೀಯ ಸಮುದಾಯ ಹಿತೈಷಿ ವೇದಿಕೆ ಇದರಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಅವಕಾಶ ದೊರಕಿತು. ಇವರ ಕಾರ್ಯಕ್ಷಮತೆಯನ್ನು ಭಾರತೀಯ ದೂತಾವಾಸದ ಕಾರ್ಯಾಲಯವು ಗಮನಿಸಿ ಶ್ಲಾಘಿಸಿತು ಪೂರ್ವ ರಾಯಭಾರಿಗಳಾಗಿ ಕುಮಾರ್ ಅವರು ಸುಬ್ರಹ್ಮಣ್ಯ ಅವರಿಗೆ ಅಭಿನಂದಿಸಿ ಪ್ರಮಾಣಪತ್ರವನ್ನು ಹಾಗೂ ನೆನಪಿನ ಕಾಣಿಕೆಯನ್ನು ನೀಡಿದ್ದಾರೆ.

ಅದೇ ಉನ್ನತಮಟ್ಟದ ಹೆಸರನ್ನು ಉಳಿಸಿಕೊಂಡು ಪ್ರಸ್ತುತ ಘನವೆತ್ತ ರಾಯಭಾರಿಗಳು ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಹಲವಾರು ಬಾರಿ ಅಭಿನಂದಿಸಿದರು. ಈ ಅಭಿನಂದನೆಗಳ ಹಿಂದಿರುವ ಕಾರಣಗಳು ಹಲವಾರು. ಅದು ಹೇಳಲು ಅರ್ಹ. ಕೊರೊನಾ ಮಹಾಮಾರಿಯ ತಾಂಡವದ ಕಾಲದಲ್ಲಿ ಅಂದರೆ 2020- 21 ರಲ್ಲಿ ಎಲ್ಲರೂ ಮನೆಯಿಂದ ಹೊರಬರಲು ಹೆದರುತ್ತಿದ್ದರು. ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ದೈನಂದಿನ ಚಟುವಟಿಕೆಯಂತೆ ಮುಂಜಾನೆ ತಮ್ಮ ವಾಹನದಲ್ಲಿ ತರಕಾರಿ, ಊಟದ ಪೊಟ್ಟಣಗಳನ್ನು ತುಂಬಿಸಿಕೊಂಡು ಸುಮಾರು 200 ಜನರಿಗೆ ಅದನ್ನು ಹಂಚುತ್ತಿದ್ದರು. ಪ್ರತಿದಿನ ಸುಮಾರು ಸುಮಾರು ಮೂರರಿಂದ ನಾಲ್ಕು ತಿಂಗಳು ಮಾಡಿದ ನಿಸ್ವಾರ್ಥ ಸೇವೆ. ನಂತರ ಭಾರತ ವಿಶೇಷ ವಿಮಾನ ಸೇವೆಗೆ ನೂರಾರು ಭಾರತೀಯರನ್ನು ಮಾತೃಭೂಮಿಗೆ ಹಿಂದಿರುಗಲು ಸಹಾಯ ಮಾಡಿದರು. ರಾಜ್ಯ, ಹಿನ್ನೆಲೆ, ಭಾಷೆ ಯಾವುದನ್ನು ಪ್ರತ್ಯೇಕಿಸದೆ ಸಮಸ್ತ ಭಾರತೀಯರನ್ನು ಒಂದೇ ತಾಯಿಯ ಮಕ್ಕಳಂತೆ ಸಹೋದರ ಭಾವದಿಂದ ಸೇವೆ ಸಲ್ಲಿಸಿರುವರು.
ರಾಜ್ಯಮಟ್ಟಕ್ಕೆ ಬಂದಾಗ ಹೆಸರಾಂತ ಸಾಹಿತಿಗಳು ಕವಿಗಳು, ಚಲನಚಿತ್ರ ನಟರು, ನಟಿಯರು, ನಿರ್ದೇಶಕರು, ಕಲಾವಿದರು, ಪತ್ರಿಕೋದ್ಯಮಿಗಳು, ಚಿಂತಕರು ಕನ್ನಡದ ಪ್ರತಿಭೆಗಳನ್ನು ಸ್ವಾಗತಿಸಿ ಸನ್ಮಾನಿಸಲು ಕೊಡುಗೆ ಅಪಾರ.
ಕತಾರ್ ನಲ್ಲಿ ಕನ್ನಡ ಚಲನಚಿತ್ರಗಳ ಬಿಡುಗಡೆ ಮಾಡಲು ಇವರು ಬಹಳ ಕಷ್ಟಪಟ್ಟಿರುವವರು ಹಾಗೂ ಹಲವಾರು ಜಟಿಲ ಸಮಸ್ಯೆಗಳನ್ನು ಎದುರಿಸಬೇಕಾಯಿತು.

ಒಟ್ಟಿನಲ್ಲಿ ಕನ್ನಡಿಗರಿಗೆ ಮಾತ್ರವಲ್ಲದೆ ಭಾರತೀಯರೆಲ್ಲರಿಗೂ ಸ್ವಯಂಸೇವಕ ಸಮಾಜಪರ ಹೊಂದಿರುವ ಬಹುಮುಖ ಪ್ರತಿಭೆ ಸರಳ ವ್ಯಕ್ತಿತ್ವ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಬಹುಮುಖ ಕೊಡುಗೆಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ. ದಿನಪತ್ರಿಕೆಗಳಲ್ಲಿ ಹಾಗೂ ವಿವಿಧ ಮಾಧ್ಯಮಗಳಲ್ಲಿ ಅವರ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳಲಾಗಿದೆ ಹಾಗೂ ಪ್ರಸಾರ ಪಡಿಸಲಾಗಿದೆ. ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುಬ್ರಮಣ್ಯ ಹೆಬ್ಬಾಗಿಲು ಅವರಿಗೆ ಸನ್ಮಾನಿಸಲಾಗಿದೆ.

ಅವರ ಪರಿಶ್ರಮ ಹೀಗೆ ಮುಂದುವರಿಯಲಿ ಹಾಗೂ ಇನ್ನೂ ಉನ್ನತಮಟ್ಟದಲ್ಲಿ ಅವರ ಕೊಡುಗೆ ಶಿಖರದೆತ್ತರಕ್ಕೆ ತಲುಪಲಿ ಎಂಬ ಶುಭ ಹಾರೈಕೆಗಳು.


Jana Jeevala
the authorJana Jeevala

Leave a Reply