ಬೆಳಗಾವಿ,: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸವದತ್ತಿ ತಾಲೂಕಿನ ಕುಟರನಟ್ಟಿ (ಹಿರೆಬುದ್ನೂರ) ಗ್ರಾಮದ ಹನಮಂತ ಸರ್ವಿ ಮೆದುಳು ನಿಷ್ಕ್ರೀಯಗೊಂಡ ನಂತರ ತನ್ನ ಅಂಗಾಂಗಳನ್ನು ದಾನ ಮಾಡಿ ಇಬ್ಬರ ಜೀವ ಉಳಿಸಿ, ಗರ್ಭಿಣಿ ಹೆಂಡ್ತಿ ಹಾಗೂ 2 ವರ್ಷದ ಮಗಳನ್ನು ಬಿಟ್ಟು ಅಗಲಿದ್ದ.
ಆರ್ಥಿಕವಾಗಿ ಹಾಗೂ ಶಿಕ್ಷಣದಿಂದ ಹಿಂದುಳಿದಿದ್ದ ಬಡಕುಟಂಬವು ಮಡುಗಟ್ಟಿದ ದುಃಖದಲ್ಲಿದ್ದ ಗರ್ಭವತಿ ಹೆಂಡ್ತಿಯು ಧೈರ್ಯದಿಂದಲೇ ಅಂಗಾಂಗ ದಾನ ಮಾಡಿ ಗ್ರಾಮದ ಜನತೆಗೆ ಒಂದು ಒಳ್ಳೆಯ ಸಂದೇಶವನ್ನು ನೀಡಿದರು. ಸಾವಿನಲ್ಲೂ ಜೀವ ಉಳಿಸುವ ಹನಮಂತ ಅವರು, ಲೀವರ, ಎರಡು ಮೂತ್ರಪಿಂಡ ಮತ್ತು ಕಣ್ಣುಗಳನ್ನು ದಾನ ಮಾಡಿದರು. ಮೂವರಿಗೆ ಹೊಸ ಜೀವನ ನೀಡಿದರೆ, ಇಬ್ಬರು ಅಂಧರಿಗೆ ದೃಷ್ಟಿ ನೀಡಿ ಬೆಳಕಾದರು. ಹಣಮಂತ ಅವರು ನಿಸ್ವಾರ್ಥ, ಸಹಾನುಭೂತಿ ಮತ್ತು ಮಾನವೀಯತೆಯ ಉದಾಹರಣೆ.
ಹನಮಂತ ಮೃತಪಟ್ಟ ಕೆಲ ಘಳಿಗೆಯಲ್ಲಿಯೇ ಅವರ 2 ವರ್ಷದ ಮಗಳಿಗೆ ಜನ್ಮತಃವಾಗಿದ್ದ ಹೃದ್ರೋಗ ತೀವ್ರಗೊಂಡಿತು. ಶಿಘ್ರವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದಾಗ ಚಿಕ್ಕಮಕ್ಕಳ ಹೃದ್ರೋಗ ತಜ್ಞವೈದ್ಯರಾದ ಡಾ. ವೀರೇಶ್ ಮಾನ್ವಿ ಅವರು ತಪಾಸಣೆಗೊಳ್ಪಡಿಸಿದಾಗ ಹೃದಯದಲ್ಲಿ ರಂದ್ರವಿರುವದು ಕಂಡು ಬಂದಿತು. ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಮಾಡಿಸಲೇಬೇಕು ಎಂದು ಸಲಹೆ ನೀಡಿದರು. ಇದರಿಂದ ಕುಟುಂಬವು ಮತ್ತೆ ಆಘಾತಕ್ಕೊಳಗಾಯಿತು.
ಮೊದಲೇ ದುಃಖದಲ್ಲಿದ್ದ ಆರ್ಥಿಕ ಪರಿಸ್ಥಿತಿಯಿಂದ ಕಂಗೆಟ್ಟಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಕಲ್ಪಿಸಿದ ರೋಟರಿ ಕ್ಲಬ್ ಆಫ್ ಬೆಳಗಾವಿ (ದಕ್ಷಿಣ)ವು ಗಿಫ್ಟ ಆಫ್ ಲೈಫ್ (ಜೀವನದ ಉಡುಗೊರೆ) ಯೋಜನೆಯಡಿ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ಸಹಕರಿಸಿದರು. ಚಿಕ್ಕಮಕ್ಕಳ ಹೃದಯ ಶಸ್ತ್ರಚಿಕಿತ್ಸಕ ಡಾ. ಗಣಂಜಯ ಸಾಳ್ವೆ ಅವರಿಗೆ ಅರವಳಿಕೆ ತಜ್ಞವೈದ್ಯ ಡಾ. ಶರಣಗೌಡಾ ಪಾಟೀಲ ಹಾಗೂ ಅವರ ತಂಡವು ಸಹಕರಿಸಿತು. ತಜ್ಞವೈದ್ಯರ ಆರೈಕೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಕುಟುಂಬದಲ್ಲಿ ಹೊಸ ಭರವಸೆ ಮೂಡಿಸಿದೆ. ‘ಗಿಫ್ಟ್ ಆಫ್ ಲೈಫ್’ ಯೋಜನೆಯಡಿ ಇಲ್ಲಿಯವರೆಗೆ 15 ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ರೋಟರಿ ಇಂಟರ್ನ್ಯಾಶನಲ್ನಿಂದ ರೋಟರಿ ಕ್ಲಬ್ ಆಫ್ ಬೆಳಗಾವಿ (ದಕ್ಷಿಣ) ದ ಸಹಕಾರದೊಂದಿಗೆ ಧನಸಹಾಯ ನೀಡಲಾಗುತ್ತದೆ.
ರೋಟರಿ ಕ್ಲಬ್ ಬೆಳಗಾವಿ (ದಕ್ಷಿಣ)ದ ನೀಲೇಶ್ ಪಾಟೀಲ್, ಭೂಷಣ ಮೋಹಿತ್ರೆ, ಚೈತನ್ಯ ಕುಲಕರ್ಣಿ, ಆರತಿ ಅಂಗಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ಅಜ್ಜಿಯೊಂದಿಗೆ ಮಾತನಾಡಿ, ನಿಮ್ಮ ಕಷ್ಟದಲ್ಲಿ ನಾವೂ ಕೂಡ ಭಾಗಿಯಾಗಿದ್ದು, ಮಗುವಿನ ಆರೋಗ್ಯದ ಕಾಳಜಿ ವಹಿಸುತ್ತೇವೆ ಎಂದ ಅವರು ಮಗುವು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು. ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ರೋಟರಿ ಕ್ಲಬ್ಗಳಂತಹ ಸಮುದಾಯ ಸಂಸ್ಥೆಗಳು ಅಗತ್ಯವಿರುವ ಕುಟುಂಬಗಳಿಗೆ ಕಾಳಜಿ ತೋರ್ಪಡಿಸುತ್ತ ಆರ್ಥಿಕ ಸಹಾಯ ಮಾಡುತ್ತಿರುವದು ಅತ್ಯಂತ ಸಂತೋಷ ಮತ್ತು ಮಾದರಿಯಾಗಿದೆ ಎಂದು ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮೋಹನ ಗಾನ ಅವರು ಹೇಳಿದರು.
ಮಕ್ಕಳಲ್ಲಿರುವ ಹೃದಯ ತೊಂದರೆಯನ್ನು ಗುಣಮುಖಗೊಳಿಸಲು ರೋಟರಿ ಕ್ಲಬ್ ಆಫ್ ಬೆಳಗಾವಿ (ದಕ್ಷಿಣ)ವು ಶ್ರಮಿಸುತ್ತಿರುವದಕ್ಕೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸಿದ್ದಾರೆ. ಹಣಮಂತನದ ಮರಣದಿಂದ ದುಖದಲ್ಲಿರುವ ಕುಟುಂಬಕ್ಕೆ ಆತನ ಗಂಡು ಮಗು ಆಗಮಿಸಿದ್ದು, ಕುಟುಂಬದ ಬಾಳಿನಲ್ಲಿ ಭರವಸೆಯ ಬೆಳಕು ಮೂಡಿದೆ
A Village Hero’s Legacy & Saving Lives & Bringing Hope by Rotary Club of Belgaum (South)
Tragedy struck the family of a Hirebudnur village of Savadatti-Taluka when a 24-year-old Hanamanth Sarvi met with a fatal road accident. He was rushed to KLES Dr. Prabhakar Kore Hospital in critical condition; Hanamanth fought bravely but succumbed to severe head injuries, leaving behind his young daughter of 2 years and wife, who was in the advanced stage of pregnancy.
In the face of unimaginable grief, Hanmanth’s family, despite their poor economic background and lack of education, made a courageous decision of donating organs; that has sent a positive message far beyond their village. Recognizing Hanamanth’s potential to save lives even in death, they chose to donate his liver, kidneys, and eyes, giving a new lease of life to three individuals and restoring sight to two others. Their selflessness in the darkest hour set a profound example of compassion and humanity.
The family’s sorrow was compounded when Hanamanth’s 2-year-old daughter was diagnosed with a congenital heart disease known as Atrial Septal Defect (ASD) which was promptly diagnosed by Dr. Veeresh Manvi, Senior Paediatric Cardiologist & advised heart surgery for closing the hole in the heart. Understanding the urgency of the situation, the Rotary Club of Belgaum (South) swiftly intervened with their “Gift of Life” initiative, securing funding for her critical heart surgery. Under the expert care of Dr. Gananjay Salve and team of Cardiac Anaesthetists, the surgery was successful, bringing new hope to the family. It may be recalled that this is the 15th child operated under ‘Gift of Life’ which is being funded by Rotary International with matching grants from Rotary Club of Belgaum (South).
In a heart-warming gesture from the Rotary Club Belgaum South team members consisting of Rtn. Neelsh Patil, Rtn. Bhushan Mohitre, Grant Coordinator Rtn. Chitanaya Kulkarni & Rtn. Arati Angadi visited the hospital & interacted with grandparents of the child & have exhibited their compassion and support during a challenging times of the family. Wishing the child a speedy recovery and expressing gratitude to the doctors highlights their appreciation for the medical care provided. It’s pleasing to see community organizations like Rotary Clubs offering such caring gestures to families in need said Dr. Mohan Gan, Head of Cardiac Surgery.
Dr. Prabhakar Kore, Chairman of KLE Society, expressed deep gratitude to the Rotary Club of Belgaum (South) for their timely support, emphasizing how their intervention had saved yet another precious life.
Amidst the family’s mourning, a ray of hope emerged with the birth of Hanamanth’s son just 5 days ago. For those who knew Hanamanth, it felt like a sign that his spirit had returned to bless his loved ones once more.