ಬೆಳಗಾವಿ: ಗೋಕಾಕ ಮಹಾಲಿಂಗೇಶ್ವರ ಕಾಲೋನಿಯಲ್ಲಿ ಮೂರು ವರ್ಷದ ಮಗು ಗೋಡೆ ಕುಸಿತ ಪರಿಣಾಮ ಮೃತಪಟ್ಟಿದೆ. ಮೂರು ವರ್ಷದ ಕೀರ್ತಿ ನಾಗೇಶ್ ಪೂಜಾರಿ ಮೃತ ಮಗು. ಮತ್ತೋರ್ವ ಬಾಲಕಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ಕ-ತಂಗಿ ಒಂದು ರೂಮಿನಲ್ಲಿ ಮಲಗಿದ್ದರೆ ತಂದೆ-ತಾಯಿ ಮತ್ತೊಂದು ರೂಮಿನಲ್ಲಿ ಮಲಗಿದ್ದರು. ಸೋಮವಾರ ನಸುಕಿನ ವೇಳೆ ಗೋಡೆ ಕುಸಿದು ಬಿದ್ದಿದೆ. ಗೋಕಾಕ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.