ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಖ್ಯಾತ ಗಾಯಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಗೈದಿರುವ ಘಟನೆ ನಡೆದಿದೆ.
22 ವರ್ಷದ ಮಾರುತಿ ಕೊಲೆಯಾದ ಯುವ ಗಾಯಕ. ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಯುವಕ ಮಾರುತಿ ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲಿ ಜಾನಪದ ಹಾಡುಗಳನ್ನು ಹಾಡುತ್ತಾ, ಯೂಟ್ಯೂಬ್ ಗಳಲ್ಲಿಯೂ ಗಮನ ಸೆಳೆದಿದ್ದ. ಉತ್ತರ ಕರ್ನಾಟದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಗಾಯಕ ಹೊಂದಿದ್ದ.
5 ಸಾವಿರ ರೂ ಹಣದ ವಿಚಾರವಾಗಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಾರುತಿ ತನ್ನ ಸ್ನೇಹಿತನೊಂದಿಗೆ ಮನೆಗೆ ವಾಪಸ್ ಆಗುತ್ತಿದ್ದಾಗ ಬೈಕ್ ಅಡ್ಡಗಟ್ಟಿದ ಈರಪ್ಪ ಎಂಬಾತ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾನೆ, ಯುವಕ ಮಾರುತಿ, ಈರಪ್ಪ ಬಳಿ 50 ಸಾವಿರ ಸಾಲ ಪಡೆದಿದ್ದನಂತೆ, ಬಹುತೇಕ ಸಾಲ ತೀರಿಸಿದ್ದ. 5 ಸಾವಿರ ಮಾತ್ರ ಬಾಕಿ ಇತ್ತು ಎನ್ನಲಾಗಿದೆ. ಇದೀಗ 5 ಸಾವಿರ ರೂಪಾಯಿಗೆ ಈರಪ್ಪ ಯುವ ಗಾಯಕನನ್ನೇ ಹತ್ಯೆ ಮಾಡಿದ್ದಾನೆ.