ಬೆಳಗಾವಿ : ಪತಿಯೊಬ್ಬ ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಗೋಕಾಕ ತಾಲೂಕಿನ ಉಪ್ಪಾರಟ್ಟಿಯಲ್ಲಿ ನಡೆದಿದೆ. ಮೃತಳನ್ನು ಮೀರಾಬಾಯಿ (25) ಎಂದು ಗುರುತಿಸಲಾಗಿದೆ. ಬಾಲಾಜಿ ಕಬಲಿ (35) ಪತ್ನಿಯನ್ನು ಕೊಲೆ ಮಾಡಿದ ಆರೋಪಿ. ಮಹಾರಾಷ್ಟ್ರ ಮೂಲದ ದಂಪತಿ ಕಬ್ಬು ಕಟಾವು ಗ್ಯಾಂಗ್ ಜೊತೆ ಉಪ್ಪಾರಟ್ಟಿಗೆ ಕೆಲಸಕ್ಕೆ ಬಂದಿದ್ದರು.