ಜನ ಜೀವಾಳ ಜಾಲ : ಸಿಂಧನೂರು : ಪಿಂಚಣಿ ಹೋರಾಟ ಮೊದಲ ಬಲಿ ಪಡೆದಿದೆ. ತೀವ್ರಗೊಂಡ ಅನುದಾನಿತ ಶಾಲಾ ಶಿಕ್ಷಕರ ಹೋರಾಟ ಇದೀಗ ಕಾವೇರಿದೆ.
ರಾಯಚೂರು ಜಿಲ್ಲೆಯ ಸಿಂಧನೂರಿನ ಶಂಕರಪ್ಪ ನಾಗಪ್ಪ ಬೋರಡ್ಡಿ (47 ವರ್ಷ) ಬುಧವಾರ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಂಧನೂರಿನ ರೆಡ್ಡಿ ಅನುದಾನಿತ ಪ್ರೌಢಶಾಲಾ ಶಿಕ್ಷಕರಾಗಿರುವ ಇವರಿಗೆ ಹದಿನಾರು ವರ್ಷದಿಂದ ಪಿಂಚಣಿ ಸೌಲಭ್ಯ ಸಿಕ್ಕಿರಲಿಲ್ಲ. ಬೆಂಗಳೂರಿನಲ್ಲಿ ಮಂಗಳವಾರ ನಡೆದ ಪ್ರಾಣ ಬಿಟ್ಟೇವು ಪಿಂಚಣಿ ಬಿಡೆವು 139 ದಿನದ ಹೋರಾಟದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ವೇದಿಕೆ ಮೇಲೆ ಫೋಟೋವನ್ನು ಸಹಾ ತೆಗೆಸಿಕೊಂಡಿದ್ದರು. ಶಂಕ್ರಪ್ಪ ಮೂಲತಃ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕು ಸುನಗ ಗ್ರಾಮದವರು.
ಅಮಾಯಕ ಶಿಕ್ಷಕನ ಆತ್ಮಹತ್ಯೆಗೆ ಶಿಕ್ಷಕರ ಸಂಘದ ಧುರೀಣ ರಾಮು ಗುಗವಾಡ ತೀವ್ರ ಸಂತಾಪ ಸೂಚಿಸಿದ್ದಾರೆ.