ಚೆನ್ನೈ: ಉದಕಮಂಡಲದ నిeలగిరి ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅವಘಡದಲ್ಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವುತ್ ಜತೆ ಅಸುನೀಗಿದ್ದ ವಾಯುಸೇನೆಯ ಭಾರತೀಯ ಪೈಲೆಟ್ ಕುಲದೀಪ್ ಸಿಂಗ್ ಅವರ ಪತ್ನಿ ತಾವೂ ಸೇನೆ ಸೇರುವ ಮೂಲಕ ಪತಿಯ ಕನಸನ್ನು ನನಸಾಗಿಸಿದ್ದಾರೆ.
ಕುಲದೀಪ ಸಿಂಗ್ ಎಂವಿ- 17వి5 ಮಲ್ಟಿ ರೋಲ್ ಹೆಲಿಕಾಪ್ಟರ್ನಲ್ಲಿ ಕೆಲಸ ಮಾಡುತ್ತಿದ್ದವರು. 2017ರಲ್ಲಿ ಸೇನೆ ಸೇರಿದ್ದ ಇವರು, ನಾಲ್ಕು ವರ್ಷಗಳ ನಂತರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವುತ್ ಅವರನ್ನು ಕರೆದೊಯ್ಯುವ ಅವಕಾಶ ಪಡೆದಿದ್ದರು. 2021ರ ಡಿ. 8ರಂದು ಸಂಭವಿಸಿದ ಅಪಘಾತದಲ್ಲಿ ಕುಲದೀಪ್ ಮಡಿದ ಬಳಿಕ ಪತ್ನಿ ಯಶಸ್ವಿನಿ ಧಾಕಾ, ಆಗಲೇ ಸೇನಾ ಸಮವಸ್ತ್ರ ತೊಡುವ ಸಂಕಲ್ಪ ಮಾಡಿ, ಕಠಿಣ ಪರಿಶ್ರಮದೊಂದಿಗೆ ಸೇನೆ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ತಮ್ಮ ಸೇನೆಯ ಪರಿವಾರದ ಹೆಮ್ಮೆ ಹೆಚ್ಚಿಸಿದ್ದಾರೆ.