ಶಿರಸಿ : ರಾಜ್ಯ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಹುಬ್ಬಳ್ಳಿಯ ವತಿಯಿಂದ ನಗರದ ನೆಮ್ಮದಿ ರಂಗಧಾಮದಲ್ಲಿ ಸೆಪ್ಟೆಂಬರ್ 14 ರಂದು ಶಿಕ್ಷಕ ಸಾಹಿತಿಗಳ ರಾಜ್ಯ ಮಟ್ಟದ ಎಂಟನೇ ಸಮ್ಮೇಳನ ಆಯೋಜಿಸಲಾಗಿದೆ. ಸಾಹಿತಿ ಡಾ. ಜಿ. ಎ. ಹೆಗಡೆ ಸೋಂದಾ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ ಎಂದು ಪರಿಷತ್ತಿನ ಶಿರಸಿ ಶೈಕ್ಷಣಿಕ ಜಿಲ್ಲೆ ಅಧ್ಯಕ್ಷ ಮನೋಹರ ಮಲ್ಮನೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನ ಶಿರಸಿಯಲ್ಲಿ ಮೊದಲ ಬಾರಿ ನಡೆಯುತ್ತಿದೆ. ಸೆಪ್ಟೆಂಬರ್ 14 ರಂದು ಬೆಳಗ್ಗೆ 9.30 ಕ್ಕೆ ಮಾರಿಕಾಂಬಾ ದೇವಾಲಯದ ಅಧ್ಯಕ್ಷ ಆರ್. ಜಿ. ನಾಯ್ಕ ಸಮ್ಮೇಳನ ಮೆರವಣಿಗೆ ಉದ್ಘಾಟಿಸಲಿದ್ದಾರೆ. ವಿ.ಪಿ.ಹೆಗಡೆ ವೈಶಾಲಿ, ರಾಮಚಂದ್ರ ಹೆಗಡೆ ಬಂಡಿಮನೆ, ರಾಮದಾಸ ಪೈ, ಆರ್.ವಿ. ಹೆಗಡೆ ಬಾಳೆಗದ್ದೆ, ಕೇಶವ ಪಾಲೇಕರ್, ವೆಂಕಟ್ರಮಣ ಹೆಗಡೆ ಮಂಜುಗುಣಿ, ಸುಭಾಸ ಕಾನಡೆ, ಸಾಮಾಜಿಕ ಚಿಂತಕ ವಿಶ್ವನಾಥ ಶರ್ಮಾ ನಾಡಗುಳಿ, ದತ್ತಗುರು ಕಂಠಿ, ಮಂಜುನಾಥ ಹೆಗಡೆ ಹುಡ್ಲಮನೆ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಅಂದು 10 ಗಂಟೆಗೆ ಸಮ್ಮೇಳವನ್ನು ಶಿಕ್ಷಕ ಸಾಹಿತಿ ಎಲ್. ಆರ್. ಭಟ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ, ಚುಟುಕು ಸಾಹಿತ್ಯ ಪರಿಷತ್ ಪ್ರಸಾರಾಂಗ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ, ಮನೋಹರ ಮಲ್ಮನೆ, ಜಿ.ಯು. ನಾಯಕ, ಕೃಷ್ಣ ಪದಕಿ, ಬಿ.ಎನ್. ವಾಸರೆ, ಜಿ. ಸು. ಭಟ್ ಬಕ್ಕಳ, ವಸಂತ ನಾಯ್ಕ ಇತರರು ಪಾಲ್ಗೊಳ್ಳುತ್ತಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಶಿಕ್ಷಣ ತಜ್ಞ, ಸಾಹಿತಿ ಡಾ. ಜಿ. ಎ. ಹೆಗಡೆ ಸೋಂದಾ ವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ಕವಿಗೋಷ್ಠಿ ನಡೆಯಲಿದೆ, ನಂತರ ಎಂದು ಮಾಹಿತಿ ನೀಡಿದರು.
11.30 ರಿಂದ ಸಮ್ಮೇಳನದ ಸರ್ವಾಧ್ಯಕ್ಷರ ಬದುಕು ಬರಹ, ಶೈಕ್ಷಣಿಕ ಸವಾಲುಗಳು ಮತ್ತು ಪರಿಹಾರದ ಕುರಿತು ಸಂವಾದಗಳು ನಡೆಯಲಿವೆ. ಅದರಲ್ಲಿ ಸಿದ್ದಾಪುರ ಎಂಜಿಸಿ ಕಾಲೇಜಿನ ಪ್ರಾಚಾರ್ಯ ಜಗನ್ನಾಥ ಮೊಗೇರ ಆಶಯ ಭಾಷಣ ಮಾಡಲಿದ್ದಾರೆ.
ಹೊನ್ನಾವರ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಮೇಶ ಹೆಗಡೆ ಕೆರೆಕೋಣ, ನಾಟಕ ತಜ್ಞ ಶಿಗ್ಗಾವಿಯ ಹನುಮಂತ ಸಾಲಿ, ಗಣಪತಿ ಭಟ್ ವರ್ಗಾಸರ ಮಾತನಾಡಲಿದ್ದಾರೆ. ರಾಜೀವ ಅಜ್ಜೀಬಳ, ಮರಿಗೌಡ ಗದಗ, ಪ್ರಕಾಶ ಕುಲಕರ್ಣಿ ಪಣಜಿ, ದಾವಣಗೆರೆ ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ, ನಿವೃತ್ತ ಸಂಪಾದಕ ಅಶೋಕ ಹಾಸ್ಯಗಾರ, ಸಾಹಿತಿ ಡಿ.ಎಸ್.ನಾಯ್ಕ ಶಿರಸಿ, ಲಯನ್ಸ್ ಕ್ಲಬ್ ಅಧ್ಯಕ್ಷ ಗುರುರಾಜ ಹೊನ್ನಾವರ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ನಂತರ ಎರಡು ಗೋಷ್ಠಿಗಳು ನಡೆಯಲಿವೆ. ಸಂಜೆ ನಡೆಯುವ ಸಮಾರೋಪದಲ್ಲಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಸ್ಕೊಡ್ವೇಸ್ ನಿರ್ದೇಶಕ ಡಾ. ವೆಂಕಟೇಶ ನಾಯ್ಕ, ವೈದ್ಯ ಸಾಹಿತಿ ಡಾ. ಸಿದ್ಧಕುಮಾರ ಘಂಟಿ ಇತರರು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೃಷ್ಣ ಪದಕಿ, ವಾಸುದೇವ ಶಾನಭಾಗ, ರಾಜು ಉಗ್ರಾಣಕರ್, ಗಣಪತಿ ಭಟ್ ವರ್ಗಾಸರ, ಸುರೇಶ ಕಡೆಮನಿ, ಹನುಮಂತ ಸಾಲಿ, ಸರ್ವಾಧ್ಯಕ್ಷ ಡಾ. ಜಿ. ಎ. ಹೆಗಡೆ ಸೋಂದಾ ಇತರರಿದ್ದರು.