ಬೆಳಗಾವಿ: ವೃತ್ತಿಪರ ನೀತಿಗಳ ಕುರಿತು ವಿಶೇಷ ಉಪನ್ಯಾಸವನ್ನು ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಆಯೋಜಿಸಲಾಯಿತು. ಕರ್ನಾಟಕ ಹೈಕೋರ್ಟ್ನ ವಕೀಲರಾದ ಶ್ರೀಧರ ಪ್ರಭು ಅವರು ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಕೀಲ ವೃತ್ತಿಯ ರಾಷ್ಟ್ರೀಕರಣ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಕೇಂದ್ರ ಸಾರ್ವಜನಿಕ ಸೇವೆಗಳಿಗೆ ಹೋಲಿಕೆಗಳನ್ನು ನೀಡಿದರು. ಜೊತೆಗೆ, ವಕೀಲ–ಮೊಕದ್ದಮೆಯವರ ಸಂಬಂಧವನ್ನು ಬಲವಾಗಿ ಉಳಿಸುವ ಮಹತ್ವವನ್ನು ವಿವರಿಸಿ, ವಿಶ್ವಾಸ,ನೈತಿಕ ನಡೆ, ಕಾನೂನು ವೃತ್ತಿಯ ಆಧಾರಸ್ತಂಭಗಳು ಎಂದು ಒತ್ತಿ ತಿಳಿಸಿದರು .
ಅವರು ತಮ್ಮ ಉಪನ್ಯಾಸವನ್ನು ವಿದ್ಯಾರ್ಥಿಗಳೊಂದಿಗೆ ಸಂವಾದಾತ್ಮಕ ಚರ್ಚೆಯ ಮೂಲಕ ಪೂರ್ಣಗೊಳಿಸಿದರು.
ಡಾ.ಎ.ಎಚ್.ಹವಾಲ್ದಾರ್ ಅಧ್ಯಕ್ಷತೆ ವಹಿಸಿದ್ದರು. ಐ.ಕ್ಯೂ.ಎ.ಸಿ ಸಂಯೋಜಕಿ
ಡಾ. ಸಮೀನಾ ನಹೀದ್ ಬೇಗ
ಸ್ವಾಗತಿಸಿದರು. ಸುಹಾನಾ ವಾಲಿ ನಿರೂಪಿಸಿದರು.
ವೃತ್ತಿಪರ ನೀತಿಗಳ ಕುರಿತು ವಿಶೇಷ ಉಪನ್ಯಾಸ
