ಭುವನೇಶ್ವರ: 20 ವರ್ಷಗಳ ಹಿಂದೆ ತನ್ನ ಮತ್ತು ತನ್ನ ಸಹೋದರನನ್ನು ತೊರೆದಿದ್ದ ತನ್ನ ಹೆತ್ತ ತಾಯಿಯನ್ನು ಹುಡುಕಿಕೊಂಡು ಸ್ಪೇನ್ ಪ್ರಜೆ ಸ್ನೇಹಾ ಭಾರತಕ್ಕೆ ಬಂದಿದ್ದಾರೆ.
ಆದಾಗ್ಯೂ, 21 ವರ್ಷದ ಸ್ನೇಹಾ ತನ್ನ ಶೈಕ್ಷಣಿಕ ಕಾರಣಕ್ಕಾಗಿ ಸೋಮವಾರ ಸ್ಪೇನ್ಗೆ ಹಿಂತಿರುಗಬೇಕಾಗಿರುವುದರಿಂದ ಅವರಿಗೆ ಈಗ ಸಮಯ ಮೀರುತ್ತಿದೆ. ಮಕ್ಕಳ ಶಿಕ್ಷಣದ ಬಗ್ಗೆ ಅಧ್ಯಯನ ಮಾಡುತ್ತಿರುವ ಅವರು, ಭಾರತದಲ್ಲಿ ಬೇರುಗಳನ್ನು ಪತ್ತೆಹಚ್ಚಲು ಬಯಸಿದ್ದರು ಮತ್ತು ಅವರ ಹಿಂದಿನ ಜೀವನದ ಬಗ್ಗೆ ಅಲ್ಪ ಮಾಹಿತಿಯೊಂದಿಗೆ ಅವರು ಭಾರತಕ್ಕೆ ಬಂದಿದ್ದಾರೆ.
ಆಕೆಯ ಸ್ಪ್ಯಾನಿಷ್ ಪೋಷಕರಾದ ಗೆಮಾ ವಿಡಾಲ್ ಮತ್ತು ಜುವಾನ್ ಜೋಶ್ ಅನ್ವೇಷಣೆಯಲ್ಲಿ ಅವಳಿಗೆ ಬೆಂಬಲ ನೀಡಿದ್ದಾರೆ ಮತ್ತು ಗೆಮಾ ಸ್ನೇಹಾ ಜೊತೆ ಆಕೆಯ ತವರು ರಾಜ್ಯವಾದ ಒಡಿಶಾಕ್ಕೆ ಬಂದಿದ್ದಾರೆ. ಅವರು 2010 ರಲ್ಲಿ ಸ್ನೇಹಾ ಮತ್ತು ಅವರ ಸಹೋದರ ಸೋಮು ಅವರನ್ನು ಭುವನೇಶ್ವರದ ಅನಾಥಾಶ್ರಮದಿಂದ ದತ್ತು ಪಡೆದಿದ್ದರು, ಅವರ ತಾಯಿ ಬನಲತಾ ದಾಸ್ ಇವರನ್ನು 2005 ರಲ್ಲಿ ತೊರೆದ ನಂತರ ಅವರನ್ನು ಈ ಅನಾಥಾಶ್ರಮದಲ್ಲಿ ಇರಿಸಲಾಗಿತ್ತು.
“ಸ್ಪೇನ್ನಿಂದ ಭುವನೇಶ್ವರಕ್ಕೆ ನನ್ನ ಪ್ರಯಾಣದ ಉದ್ದೇಶ ನನ್ನ ಹೆತ್ತ ಪೋಷಕರನ್ನು, ವಿಶೇಷವಾಗಿ ನನ್ನ ತಾಯಿಯನ್ನು ಹುಡುಕುವುದು. ನಾನು ಅವಳನ್ನು ಹುಡುಕಲು ಮತ್ತು ಭೇಟಿಯಾಗಲು ಬಯಸುತ್ತೇನೆ. ಕಷ್ಟವಾದರೂ ಅದನ್ನು ಎದುರಿಸಲು ನಾನು ಸಂಪೂರ್ಣವಾಗಿ ಸಿದ್ಧಳಾಗಿದ್ದೇನೆ” ಎಂದು ಸ್ನೇಹಾ ಹೇಳಿದ್ದಾರೆ.
ತನ್ನ ಜೈವಿಕ ತಾಯಿ ನಿಮ್ಮನ್ನು ತ್ಯಜಿಸಿದ್ದಕ್ಕಾಗಿ ಅವಳನ್ನು ದೂಷಿಸುತ್ತೀರಾ ಎಂದು ಕೇಳಿದಾಗ, ಸ್ನೇಹಾ ಮೌನವಾಗಿಯೇ ಉಳಿದರು. ಅವರ ತಾಯಿ ಬಿಟ್ಟುಹೋದಾಗ ಆಕೆ ಕೇವಲ ಒಂದು ವರ್ಷಕ್ಕಿಂತ ಮೇಲ್ಪಟ್ಟವಳು, ಮತ್ತು ಆ ಸಮಯದಲ್ಲಿ ಆಕೆಯ ಸಹೋದರನಿಗೆ ಕೆಲವೇ ತಿಂಗಳುಗಳಾಗಿತ್ತಂತೆ.
ಸ್ಪೇನ್ನ ಜರಗೋಜಾ ನಗರದಲ್ಲಿ ಯೋಗ ಶಿಕ್ಷಕಿ ಜೆಮಾ ಅವರೊಂದಿಗೆ ಡಿಸೆಂಬರ್ 19 ರಂದು ಸ್ನೇಹಾ ಭುವನೇಶ್ವರಕ್ಕೆ ಬಂದರು ಮತ್ತು ಅವರು ಹೋಟೆಲ್ನಲ್ಲಿ ತಂಗಿದ್ದರು. ಆದರೆ ಸೋಮು ಅವರು ಸ್ಪೇನ್ನಲ್ಲಿ ಕೆಲವು ಕೆಲಸಗಳ ಕಾರಣದಿಂದ ಆತನಿಗೆ ಬರಲು ಸಾಧ್ಯವಾಗಲಿಲ್ಲ.
ಅವರು ಸೋಮವಾರದೊಳಗೆ ಸ್ನೇಹಾಳ ಜೈವಿಕ ತಾಯಿಯನ್ನು ಕಂಡುಹಿಡಿಯದಿದ್ದರೆ, ನಂತರ ಅವರು ವಾಪಸ್ ಹೋಗಿ ಹೆಚ್ಚು ಕಾಲ ಉಳಿಯಲು ಮಾರ್ಚ್ನಲ್ಲಿ ಮತ್ತೆ ಭಾರತಕ್ಕೆ ವಾಪಸ್ ಬರಲಿದ್ದಾರೆ.
“ಸ್ನೇಹಾ ತರಬೇತಿ ಕಾರ್ಯಕ್ರಮಕ್ಕೆ ಸೇರಿಕೊಂಡಿದ್ದರಿಂದ ನಾವು ಸ್ಪೇನ್ಗೆ ಹಿಂತಿರುಗಬೇಕಾಗಿದೆ, ಅದನ್ನು ನಿಲ್ಲಿಸಬಾರದು. ನಮಗೆ ಮುಂದಿನ 24 ಗಂಟೆಗಳಲ್ಲಿ ಬನಲತಾ ದಾಸ್ ಸಿಗದಿದ್ದರೆ, ನಾವು ಮಾರ್ಚ್ನಲ್ಲಿ ಭುವನೇಶ್ವರಕ್ಕೆ ವಾಪಸ್ ಬರುತ್ತೇವೆ” ಎಂದು ಗೆಮಾ ಹೇಳಿದರು.
2005ರಲ್ಲಿ ಬನಲತಾ ಅವರು ಸ್ನೇಹ ಮತ್ತು ಸೋಮು ಅವರನ್ನು ಭುವನೇಶ್ವರದ ನಾಯಪಲ್ಲಿ ಪ್ರದೇಶದ ಬಾಡಿಗೆ ಮನೆಯಲ್ಲಿ ಬಿಟ್ಟು ಹೋಗಿದ್ದರು. ಖಾಸಗಿ ಸಂಸ್ಥೆಯೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಬನಲತಾ ಅವರ ಪತಿ ಸಂತೋಷ ಅವರು ಈ ಹಿಂದೆ ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಒಳಗೊಂಡ ಕುಟುಂಬವನ್ನು ತೊರೆದಿದ್ದರು.
ನಂತರ ಬನಲತಾ ಕೂಡ ಇನ್ನೊಬ್ಬ ಮಗ ಮತ್ತು ಮಗಳ ಜೊತೆ ಬಾಡಿಗೆ ಮನೆ ಬಿಟ್ಟು ಹೋಗುವಾಗ ಸ್ನೇಹಾ ಮತ್ತು ಸೋಮು ಅವರನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ನಂತರ ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ ನಂರೆ ಅವರನ್ನು ಅನಾಥಾಶ್ರಮಕ್ಕೆ ಸ್ಥಳಾಂತರಿಸಲಾಗಿತ್ತು
2010 ರಲ್ಲಿ, ಐದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಸ್ನೇಹಾ ಮತ್ತು ಸುಮಾರು ನಾಲ್ಕು ವರ್ಷದ ಸೋಮು ಅವರನ್ನು ಸ್ಪ್ಯಾನಿಷ್ ದಂಪತಿಗಳು ಕಾನೂನುಬದ್ಧವಾಗಿ ದತ್ತು ಪಡೆದರು.
ಒಡಿಶಾದಲ್ಲಿ ತಮ್ಮ ಬೇರುಗಳ ಬಗ್ಗೆ ಮತ್ತು ಅವರು ದತ್ತು ಪಡೆದ ಬಗ್ಗೆ ಸ್ನೇಹಾ ಮತ್ತು ಸೋಮು ಅವರಿಗೆ ಜೆಮಾ ಈ ಹಿಂದೆ ಹೇಳಿದ್ದರು.”ಸ್ನೇಹಾ ತುಂಬಾ ಜವಾಬ್ದಾರಿಯುತಳು ಮತ್ತು ವಿದ್ಯಾವಂತಳು, ಅವಳು ನಮ್ಮ ಮನೆಯ ಸಂತೋಷ, ಅವಳು ನಮ್ಮ ಜೀವನ. ಅವರು ಸುಶಿಕ್ಷಿತರು ಮತ್ತು ಸಂಶೋಧನೆ ನಡೆಸುತ್ತಿದ್ದಾರೆ, ಆದ್ದರಿಂದ ಅವರು ತಮ್ಮ ಜೈವಿಕ ತಾಯಿಯನ್ನು ಪತ್ತೆಹಚ್ಚಲು ನಿರ್ಧರಿಸಿದರು ಮತ್ತು ನಾನು ಅವಳೊಂದಿಗೆ ಈ ಸ್ಥಳಕ್ಕೆ ಬಂದೆ” ಎಂದು ಗೆಮಾ ಹೇಳಿದರು.
ಭುವನೇಶ್ವರದಲ್ಲಿ ತಮ್ಮ ಹುಡುಕಾಟದ ಸಮಯದಲ್ಲಿ, ಗೆಮಾ ಮತ್ತು ಸ್ನೇಹಾ ರಮಾ ದೇವಿ ಮಹಿಳಾ ವಿಶ್ವವಿದ್ಯಾಲಯದ ನಿವೃತ್ತ ಶಿಕ್ಷಕಿ ಸ್ನೇಹಾ ಸುಧಾ ಮಿಶ್ರಾ ಅವರನ್ನು ಭೇಟಿಯಾದರು. ಅವರು ತಮ್ಮ ಪೋಷಕರ ಹೆಸರನ್ನು ಕಂಡುಹಿಡಿಯಲು ಸಹಾಯ ಮಾಡುತ್ತಿದ್ದಾರೆ.
“ನಾಯಪಲ್ಲಿಯಲ್ಲಿರುವ ಮನೆ ಮಾಲೀಕರಿಂದ ಆಕೆಯ ಪೋಷಕರ ಹೆಸರುಗಳನ್ನು ನಾವು ಕಂಡುಕೊಂಡಿದ್ದೇವೆ ಮತ್ತು ನಂತರ ಪೊಲೀಸರು ಮತ್ತು ಅನಾಥಾಶ್ರಮದಲ್ಲಿ ಹೆಸರುಗಳನ್ನು ಪರಿಶೀಲಿಸಲಾಗಿದೆ” ಎಂದುಸ್ನೇಹಾ ಸುಧಾ ಮಿಶ್ರಾ ಹೇಳಿದ್ದಾರೆ.
ಮಿಶ್ರಾ ಅವರ ಸಹಾಯದಿಂದ, ಸ್ನೇಹಾ ಮತ್ತು ಗೆಮಾ ನಗರ ಪೊಲೀಸ್ ಕಮಿಷನರ್ ದೇವದತ್ತಾ ಸಿಂಗ್ ಅವರನ್ನು ಭೇಟಿಯಾದರು, ಅವರು ಬನಲತಾ ದಾಸ್ ಮತ್ತು ಸಂತೋಷ ದಾಸ್ ಅವರನ್ನು ಪತ್ತೆ ಮಾಡುವ ಕೆಲಸವನ್ನು ಇಬ್ಬರು ಪೊಲೀಸ್ ಸಿಬ್ಬಂದಿ ಅಂಜಲಿ ಛೋಟ್ರೇ ಮತ್ತು ಗಂಗಾಧರ ಪ್ರಧಾನ್ ಅವರಿಗೆ ವಹಿಸಿದ್ದಾರೆ.
“ಬನಲತಾ ದಾಸ್ ಮತ್ತು ಸಂತೋಷ ಅವರು ಕಟಕ್ ಜಿಲ್ಲೆಯ ಬದಂಬಾ-ನರಸಿಂಗಪುರ ಪ್ರದೇಶದವರು ಎಂದು ನಮಗೆ ಮಾಹಿತಿ ಸಿಕ್ಕಿದೆ. ನಾವು ಅವರನ್ನು ಪತ್ತೆಹಚ್ಚಲು ಪೊಲೀಸರು ಮತ್ತು ಪಂಚಾಯತ ಸಿಬ್ಬಂದಿಯನ್ನು ತೊಡಗಿಸಿಕೊಂಡಿದ್ದೇವೆ” ಎಂದು ಇನ್ಸ್ಪೆಕ್ಟರ್ ಅಂಜಲಿ ಛೋತ್ರೇ ಹೇಳಿದ್ದಾರೆ.