ಬೆಳಗಾವಿ: ಜನ ಜೀವಾಳ ಜಾಲ: ಬೆಳಗಾವಿಯ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿ ಆಕಾಶ ಭೈರಣ್ಣವರ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.
ಬೆಳಗಾವಿಯ ಆದಾಯ ತೆರಿಗೆ ಕಚೇರಿಯ ವೃತ್ತ 1 ರಲ್ಲಿ ಬರುವ ಬೆಳಗಾವಿ, ವಿಜಯಪುರ ಜಿಲ್ಲೆಗಳ ಹೊಣೆ ನಿಭಾಯಿಸಲಿದ್ದಾರೆ. ಅವರು ಈ ಮೊದಲು ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಆದಾಯ ತೆರಿಗೆ ಉಪ ಆಯುಕ್ತರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ.
ಈ ಇಲಾಖೆ ಸೇರುವ ಮೊದಲು ಕೇಂದ್ರ ವಾಣಿಜ್ಯ ತೆರಿಗೆ ಇಲಾಖೆಯ ಮೌಲ್ಯಮಾಪನ, ತನಿಖೆ, ಕೇಂದ್ರ ಆರೋಪಗಳು ಮತ್ತು ಆಡಳಿತದಲ್ಲಿ ಸೇವೆ ಸಲ್ಲಿಸಿದ್ದಾರೆ.
ಅತ್ಯಂತ ಮೃದು ಸ್ವಭಾವದ ಆಕಾಶ ಭೈರಣ್ಣವರ 2014 ನೇ ಬ್ಯಾಚಿನ ಐಆರ್ ಎಸ್ ಅಧಿಕಾರಿಯಾಗಿದ್ದಾರೆ. ಮೂಲತಃ ಬೆಳಗಾವಿಯವರೇ ಆಗಿರುವ ಅವರು ಲಿಂಗರಾಜ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪೂರೈಸಿದ್ದಾರೆ. ಅವರ ತಂದೆ – ತಾಯಿ ಕುಮುದಿನಿ ಭೈರಣ್ಣವರ ಶಿಕ್ಷಣ ಇಲಾಖೆಯ ಸೇವೆಯಲ್ಲಿ ಗುರುತಿಸಿಕೊಂಡವರು. ಅವರ ಸಹೋದರ ಮತ್ತು ಸಹೋದರಿಯರು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಆಕಾಶ ಭೈರಣ್ಣವರ ಅವರಿಗೆ ತವರಿನಲ್ಲೇ ಸೇವೆ ಸಲ್ಲಿಸುವ ಅಪರೂಪದ ಅವಕಾಶ ಲಭಿಸಿದೆ.
ಅವರ ಕೆಲವೇ ತಿಂಗಳಲ್ಲಿ ಜಂಟಿ ಆಯುಕ್ತರಾಗಿಯೂ ಪದೋನ್ನತಿ ಹೊಂದಲಿದ್ದಾರೆ. ಅವರ ಬೆಳಗಾವಿ ಆಗಮನ ಗೆಳೆಯರ ಬಳಗದಲ್ಲಿ ಹರುಷ ತಂದಿದೆ. ಅವರ ಅತ್ಯುತ್ತಮ, ಪ್ರಾಮಾಣಿಕ ಸೇವೆ ಬೆಳಗಾವಿಗೆ ಲಭಿಸಲಿ ಎಂದು ಹಾರೈಸಿದ್ದಾರೆ. ‘ಜನಜೀವಾಳ’ ವೂ ಕೂಡ ಅವರಿಗೆ ಶುಭ ಕೋರುತ್ತದೆ. Akash Bhairannavar IRS of 2014 batch.Joined Belgavi Income Tax Office as Deputy Commissioner of Income Tax, Circle 1, Belagavi. Earlier served as Deputy Commissioner of Income Tax at Hubballi and Bangalore. Has served in Assessments, Investigation, Central charges and Administration