ಕೋಲ್ಕತ್ತಾ: ತರಗತಿಯೊಳಗೆ ವಿದ್ಯಾರ್ಥಿಯನ್ನು
‘ಮದುವೆಯಾಗುತ್ತಿರುವ’ ವೀಡಿಯೊ ವೈರಲ್ ಆದ ಬೆನ್ನಲ್ಲೇ ಪಶ್ಚಿಮ ಬಂಗಾಳದ ವಿಶ್ವವಿದ್ಯಾಲಯವೊಂದರ ಹಿರಿಯ ಮಹಿಳಾ ಪ್ರಾಧ್ಯಾಪಕಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಮೌಲಾನಾ ಅಬುಲ್ ಕಲಾಂ ಆಜಾದ್ ತಂತ್ರಜ್ಞಾನ ವಿಶ್ವವಿದ್ಯಾಲಯ ಆಡಳಿತದಲ್ಲಿರುವ ನಾಡಿಯಾದ ಹರಿಂಗತಾ ತಂತ್ರಜ್ಞಾನ ಕಾಲೇಜಿನ ಮನೋವಿಜ್ಞಾನ ವಿಭಾಗದಲ್ಲಿ ಪಾಯಲ್ ಬ್ಯಾನರ್ಜಿ ಅವರು ಕಾಲೇಜು ವಿದ್ಯಾರ್ಥಿನಿಯೊಂದಿಗೆ ತರಗತಿಯಲ್ಲಿ ಹಿಂದೂ ಬಂಗಾಳಿ ವಿವಾಹ ವಿಧಿವಿಧಾನಗಳನ್ನು ಮಾಡುತ್ತಿರುವ ವಿಡಿಯೋ ಜನವರಿ 28ರಂದು ವೈರಲ್ ಆಗಿತ್ತು. ತರಗತಿಯಲ್ಲಿ ಪರಿಕಲ್ಪನೆಗಳನ್ನು ವಿವರಿಸಲು ಉದ್ದೇಶಿಸಲಾದ ‘ಮಾನಸಿಕ ನಾಟಕ ಇದಾಗಿತ್ತು. ಆದರೆ ಇದನ್ನು ದುರುದ್ದೇಶಕಪೂರ್ವಕವಾಗಿ ವೈರಲ್ ಮಾಡಲಾಗಿದೆ ಎಂದು ಪ್ರಾಧ್ಯಾಪಕಿ ಹೇಳಿದ್ದಾರೆ.
ನಾವು ಫ್ರೆಷರ್ ಪಾರ್ಟಿಗಾಗಿ ಯೋಜಿಸಿದ್ದ ನಾಟಕ. ಇದನ್ನು ನನ್ನ ವಿರುದ್ಧದ ಪಿತೂರಿಯ ಭಾಗವಾಗಿ ಉದ್ದೇಶಪೂರ್ವಕವಾಗಿ ವೈರಲ್ ಮಾಡಲಾಗಿದೆ.ನನ್ನ ಮಾನಹಾನಿ ಮಾಡಲು ಪ್ರಯತ್ನಿಸಿದವರ ವಿರುದ್ಧ ನಾನು ಪೊಲೀಸ್ ದೂರು ನೀಡುತ್ತೇನೆ ಎಂದು ಪ್ರಾಧ್ಯಾಪಕಿ ಕೂಡ ಹೇಳಿದ್ದಾರೆ. ಯಾವುದೇ ಅನುಚಿತತೆ, ಅನೈತಿಕ ನಡವಳಿಕೆ ಇಲ್ಲ ಮತ್ತು ಇದು ಸಂಪೂರ್ಣವಾಗಿ ಕಾಲೇಜಿಗೆ ಸಂಬಂಧ ಪಟ್ಟ ನಾಟಕದ ಭಾಗವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.