ಬೆಳಗಾವಿ :
ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಪೋಕ್ಸೋ ಕಾಯ್ದೆಯಡಿ ವಿಚಾರಣೆ ಎದುರಿಸುತ್ತಿದ್ದ ಕೈದಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಿತ್ತೂರು ತಾಲ್ಲೂಕು ಬಚ್ಚನಕೇರಿ ಗ್ರಾಮದ ಮಂಜುನಾಥ್ ನಾಯ್ಕರ್ (20)ಆತ್ಮಹತ್ಯೆ ಮಾಡಿಕೊಂಡವ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ 3 ತಿಂಗಳ ಹಿಂದೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ಬಂಧಿಸಲ್ಪಟ್ಟು ಹಿಂಡಲಗಾ ಜೈಲು ಸೇರಿದ್ದ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವುದು ಗೊತ್ತಾಗಿಲ್ಲ.