ಬೆಳಗಾವಿ: ಬೆಳಗಾವಿ ಮಹಾ ನಗರದ ಪ್ರಮುಖವಾದ ಮಾರುಕಟ್ಟೆ ಪ್ರದೇಶವಾಗಿರುವ ರವಿವಾರ ಪೇಟೆಯಲ್ಲಿರುವ ಪ್ಲಾಸ್ಟಿಕ್ ಅಂಗಡಿಗೆ ಶುಕ್ರವಾರ ಬೆಳಗಿನ ಜಾವ 3.30ರ ಆಸುಪಾಸು ಬೆಂಕಿ ಅವಘಡ ಸಂಭವಿಸಿದೆ. ಇದರಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.
ರವಿವಾರ ಪೇಟೆಯ ಕಾಂದಾ ಮಾರ್ಕೆಟ್ ನಲ್ಲಿಯ ಪ್ಲಾಸ್ಟಿಕ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ಅಪಾರ ಪ್ರಮಾಣ ಹಾನಿ ಸಂಭವಿಸಿದೆ.
ಪ್ಲಾಸ್ಟಿಕ್ ಅಂಗಡಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆಯೋ ಇಲ್ಲವೇ ಬೇರೆ ಕಾರಣಕ್ಕೆ ಬೆಂಕಿ ತಗುಲಿದೆಯೋ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರೊಳಗೆ ಇಡೀ ಅಂಗಡಿ ಸುಟ್ಟು ಕರಕಲಾಗಿತ್ತು.
ಕಾಂದಾ ಮಾರ್ಕೆಟ್ ನಲ್ಲಿರುವ ಪೃಥ್ವಿ ನಾಲ್ವಡಿ ಎಂಬವರಿಗೆ ಸೇರಿದ ಪ್ಲಾಸ್ಟಿಕ್ ಅಂಗಡಿ ಇದಾಗಿದೆ. ಎರಡು ಅಗ್ನಿ ಶಾಮಕವಾಹನಗಳು ಬಂದಿದ್ದು, 15ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

 
             
         
         
        
 
  
        
 
    