ಬೆಂಗಳೂರು:
ವಿಶ್ವದ 2ನೇ ಟ್ರಾಫಿಕ್ ಜಾಮ್ ನಗರಿ ಎನ್ನುವ ಕುಖ್ಯಾತಿಗೆ ಪಾತ್ರವಾಗಿರುವ ರಾಜ್ಯ ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಯುವತಿಯೊಬ್ಬರು ಲ್ಯಾಪ್ ಟಾಪ್ ಓಪನ್ ಮಾಡಿ ಕೆಲಸ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಫೋಟೋವನ್ನು ಟ್ವಿಟರ್ ಬಳಕೆದಾರರೊಬ್ಬರು ಸೋಪಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗೆ ಬೆಂಗಳೂರಿನ ಉತ್ತುಂಗದ ಕ್ಷಣ ಎಂಬ ಶೀರ್ಷಿಕೆ ನೀಡಿದ್ದು, ಕೋರಮಂಗಲದ ರಸ್ತೆಯಲ್ಲಿ ತೆಗೆಯಲಾಗಿದೆ. ಫೋಟೋದಲ್ಲಿರುವ ಯುವತಿ ರಾಪಿಡೋ ಬೈಕ್ ನಲ್ಲಿ ಕಚೇರಿಗೆ ಹೋಗುತ್ತಿದ್ದಾರೆ ಎನ್ನಲಾಗಿದೆ.
ಒತ್ತಡಗಳ ಮಧ್ಯೆ ನೀವು ದಿನಕ್ಕೆ 10 ಗಂಟೆಗಳಿಗೂ ಅಧಿಕ ಕಾಲ ಕೆಲಸ ಮಾಡುವುದನ್ನು ಕಲ್ಪಿಸಿಕೊಳ್ಳಿ. ಸದ್ಯ ಆ ಮಹಿಳೆಗೆ ಬೇಕಾಗಿರುವುದು ಟ್ರಾಫಿಕ್ ರಹಿತ ಸುಗಮ ಸಂಚಾರ. ಸುಗಮ ಸಂಚಾರದಿಂದ ಆ ರಸ್ತೆಯಲ್ಲಿ ಅವರು ತನ್ನ ಮನೆಯಿಂದ ಶಾಂತಿಯುತವಾಗಿ ಪ್ರಯಾಣಿಸಿ 5 ಕಿ.ಮೀ ಪ್ರಯಾಣಕ್ಕೆ ಹೆಚ್ಚುವರಿ ಅವಧಿ ತೆಗೆದುಕೊಳ್ಳುವುದು ಉಳಿಯುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.