ಮೂಡಲಗಿ :
ಲೈನ್ ಕ್ಲಿಯರೆನ್ಸ್ ಪಡೆಯದೆ ಕೆಲಸ ಮಾಡುತ್ತಿದ್ದಾಗ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದವ ದುರ್ಮರಣ ಹೊಂದಿದ ಘಟನೆ ನಡೆದಿದೆ.
ಮಂಗಳವಾರ ಸಂಜೆ ೬-೧೦ ಸುಮಾರಿಗೆ ಮೂಡಲಗಿ ಕೊಳವಿ ತೋಟದಲ್ಲಿ ಕೆ.ಇ.ಬಿ.ಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಂಜುನಾಥ ಮಲ್ಲಪ್ಪ ಗಾಣಿಗೇರ ವಯಸ್ಸು (21) ವರ್ಷ ಸಾ: ಮೂಡಲಗಿ ಟ್ರಾನ್ಸ್ ಫಾರ್ಮರ್ ರಿಪೇರಿ ಕೆಲಸ ಮಾಡುತ್ತಿದ್ದಾಗ, ಕರೆಂಟ್ ಶಾಕ್ ತಗುಲಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಮೃತರಿಗೆ ಲೈನ್ ಮನ್ ಕರೆದುಕೊಂಡು ಹೋಗಿ ಕೆ.ಇ.ಬಿ. ಸೆಂಟರ್ ದಿಂದ ಯಾವುದೇ ಲೈನ್ ಕ್ಲಿಯರನ್ಸ್ ತೆಗೆದುಕೊಳ್ಳದೇ ಕೆಲಸ ಮಾಡುತ್ತಿರುವಾಗ ನಿಗದಿತ ವೇಳೆಗೆ ಕರೆಂಟ್ ಬಂದಿದ್ದರಿಂದ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದು ಲೈನ್ ಮ್ಯಾನ್ ಇದಕ್ಕೆ ನೇರ ಕಾರಣ ಎಂದು ಜನ ದೂರಿದ್ದಾರೆ.