ಬೆಳಗಾವಿ : ಖಾನಾಪುರ ತಾಲೂಕು ನಾಗರಗಾಳಿ ವಲಯದ ಅರಣ್ಯದಲ್ಲಿ ಶ್ರೀಗಂಧದ ಮರ ಬೇರು ಸಮೇತ ಕಡಿದು ಸಾಗಿಸಿದ ಗರ್ಬೇನಟ್ಟಿ ಗ್ರಾಮದ ಮಂಜು ಬಸಪ್ಪ ಮುರಗೋಡ ಎಂಬುವನನ್ನು ಅರಣ್ಯಾಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ. ಸುಮಾರು 1 ಕೆಜಿ 200 ಗ್ರಾಂ ತೂಕದ ಶ್ರೀಗಂಧದ ಗಿಡವನ್ನು ಬೇರು ಸಮೇತ ಕಡಿದು ಒಯ್ದಿದ್ದಾನೆ. ಸಾಗಾಣಿಕೆಗೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ. ಈತನನ್ನು ನ್ಯಾಯಾಲಯದ ಸೂಚನೆ ಮೇರೆಗೆ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ನಾಗರಗಾಳಿ ಎಸಿಎಫ್ ಶಿವಾನಂದ ಮಗದುಮ ನೇತ್ರತ್ವದಲ್ಲಿ ನಾಗರಗಾಳಿ ಆರ್ಎಫ್ ಒ ಪ್ರಶಾಂತ ಮಂಗಸೂಳಿ, ನೇರಡಾ ಡಿಆರ್ ಎಫ್.ಒ. ಎನ್.ಜಿ. ಹಿರೇಮಠ, ಸಿಬ್ಬಂದಿ ವಿಜಯ ಕೌಜಲಗಿ, ಮಂಜು ಗೌಡರ, ಪ್ರದೀಪ ತುರಮರಿ, ಶ್ರವಣ ಕುಮಾರ್ ಭಾಗವಹಿಸಿದ್ದರು. ನಾಗರಗಾಳಿ ವಲಯ ಅರಣ್ಯ ಅಧಿಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀಗಂಧ ಮರ ಕಡಿದು ಒಯ್ಯುತ್ತಿದ್ದ ವ್ಯಕ್ತಿಯ ಬಂಧನ : ಜೈಲಿಗೆ ರವಾನೆ
