ಬೆಳಗಾವಿ: ಬೆಳಗಾವಿ ಶಹಾಪುರ ಸ್ಮಶಾನದಲ್ಲಿ
ಅಸ್ಥಿ ವಿಸರ್ಜನೆಗೆ ಸ್ಮಶಾನಕ್ಕೆ ಬಂದ ವ್ಯಕ್ತಿಯ ತಲೆ ಮೇಲೆ ಶವದಹನ ಸ್ಥಳದ ಮೇಲ್ಛಾವಣಿ ಕುಸಿದು ಬಿದ್ದು ತುಸು ಗಾಯವಾಗಿದೆ. ದೇವೇಂದ್ರ ಎಂಬುವರ ಮಾವನ ಪ್ರಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಇದೇ ಸ್ಮಶಾನದಲ್ಲಿ ಮಾಡಲಾಗಿದ್ದು ರವಿವಾರ ಅಸ್ಥಿ ವಿಸರ್ಜನೆ ಇತ್ತು. ಹಾಲು, ತುಪ್ಪ ಬಿಟ್ಟು ಆಸ್ಥಿ ಎತ್ತುವಾಗ ಸ್ಮಶಾನದ ಸ್ಥಳದಲ್ಲಿದ್ದ ಮೇಲ್ಛಾವಣಿ ತುಂಡಾಗಿ ಅವರ ತಲೆ ಮೇಲೆ ಬಿದ್ದು ಅವರ ತಲೆಗೆ ಗಾಯವಾಗಿದೆ.