ಜೋಧಪುರ :
ರಾಜಸ್ಥಾನದ 44 ವರ್ಷದ ಜಸಾಬ್ ಖಾನ್ ಎಂಬಾತನಿಗೆ ಹಾವು ಕಚ್ಚಿದ್ದು, ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ಮಾರನೇ ದಿನವೇ ಮತ್ತೊಮ್ಮೆ ಹಾವು ಕಚ್ಚಿದ ನಂತರ ಮೃತಪಟ್ಟ ಘಟನೆ ವರದಿಯಾಗಿದೆ.
ಜಸಾಬ್ ಖಾನ್ ಜೋಧ್ಪುರ ಜಿಲ್ಲೆಯ ಮೆಹ್ರಾನ್ಗಢ ಗ್ರಾಮದ ನಿವಾಸಿಯಾಗಿದೆ. ಆತನಿಗೆ ಎರಡೂ ಬಾಯೂ ‘ಬಂಡಿ’ ಎಂದು ಕರೆಯಲ್ಪಡುವ ಹಾವು ಕಚ್ಚಿದೆ ಎಂದು ಹೇಳಲಾಗುತ್ತದೆ.
ಇದು ಸಾಮಾನ್ಯವಾಗಿ ರಾಜಸ್ಥಾನದ ಮರುಭೂಮಿ ಪ್ರದೇಶಗಳಲ್ಲಿ ಕಂಡುಬರುವ ವಿಷಕಾರಿ ಹಾವಿನ ಉಪ-ಜಾತಿಯಾಗಿದೆ.
ಈ ದುರಂತ ಮತ್ತು ವಿಲಕ್ಷಣ ಘಟನೆಯನ್ನು ಇದೀಗ ಭನಿಯಾನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜೂನ್ 20 ರಂದು ಜಸಾಬ್ ಪಾದದ ಮೇಲ್ಭಾಗಕ್ಕೆ ಹಾವು ಕಚ್ಚಿದೆ. ನಂತರ ಆತನನ್ನು ತಕ್ಷಣವೇ ಪೋಖ್ರಾನ್ನ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆದು ಜೂನ್ 25 ರಂದು ಮನೆಗೆ ಮರಳಿದ ಒಂದು ದಿನದ ನಂತರ ಮತ್ತೆ ಹಾವು ಕಚ್ಚಿತು. ಈ ಬಾರಿ ಅದು ಜಸಾಬ್ ಖಾನ್ ಅವರ ಇನ್ನೊಂದು ಕಾಲಿಗೆ ಕಚ್ಚಿದೆ.
ತಕ್ಷಣವೇ ಅವರನ್ನು ಜೋಧಪುರ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮೊದಲ ಹಾವು ಕಡಿತದಿಂದ ದೇಹವು ಇನ್ನೂ ಚೇತರಿಸಿಕೊಳ್ಳುತ್ತಿದ್ದುದರಿಂದ ಖಾನ್ ಎರಡನೇ ಬಾರಿಗೆ ಕಚ್ಚಿದ ಹಾವಿನ ವಿಷದಿಂದ ಬದುಕಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತದೆ.
ಜಸಾಬ್ ಅವರು ತಾಯಿ, ಪತ್ನಿ, ನಾಲ್ವರು ಪುತ್ರಿಯರು ಹಾಗೂ 5 ವರ್ಷದ ಪುತ್ರನನ್ನು ಅಗಲಿದ್ದಾರೆ. ಜಸಾಬ್ ಸಾವಿಗೆ ಕಾರಣವಾದ ಹಾವನ್ನು ಆತನ ಕುಟುಂಬಸ್ಥರು ಕೊಂದು ಹಾಕಿದ್ದಾರೆ.