ದೆಹಲಿ :
ಸಂಸತ್ ನೊಳಕ್ಕೆ ಕೆಲವರು ನುಂಗಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಇರಲಿಲ್ಲ. ಆದರೆ, ರಾಹುಲ್ ಗಾಂಧಿ ಸೇರಿದಂತೆ ಇತರರು ಇದ್ದರು.
ಪ್ರಾಥಮಿಕ ಮಾಹಿತಿ ಪ್ರಕಾರ ಸಂಸತ್ತಿನೊಳಗೆ ನುಗಿದ ಯುವಕರು ಯಾವುದೇ ಸಂಘಟನೆಗೆ ಸೇರಿದವರಲ್ಲ, ಸರಕಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸುವುದು ಅವರ ಉದ್ದೇಶ ಇತ್ತು ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇಬ್ಬರು ಯುವಕರಲ್ಲಿ ಒಬ್ಬಾತ ಮೈಸೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ.
ಲೋಕಸಭಾ ಕಲಾಪ ವೇಳೆ ವೀಕ್ಷಕರ ಗ್ಯಾಲರಿಯ ಸಂಸದರ ಆಸನಗಳ ಮುಂಭಾಗದ ಮೇಲಿನ ಮೇಜಿನ ಮೇಲೆ ಜಿಗಿದ ಇಬ್ಬರು ಅಪರಿಚಿತರು ಹಾಗೂ ಹೊರಗೆ ಘೋಷಣೆ ಕೂಗಿದ ಇಬ್ಬರು ಸೇರಿ ಒಟ್ಟು 4 ಜನರ ಬಂಧನವಾಗಿದೆ. ಸಂಜೆ ಸಂಸದರ ಸಭೆ ನಡೆಸಲಾಗುತ್ತಿದೆ ಎಂದು ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ವೀಕ್ಷಕರ ಗ್ಯಾಲರಿಯಲ್ಲಿದ್ದ ಅಪರಿಚಿತರು ಸದನದೊಳಗೆ ನುಗ್ಗಿದ್ದಾರೆ. ಹಳದಿ ಬಣ್ಣದ ಹೊಗೆ ಸಿಂಪಡಿಸಿ ಸರ್ವಾಧಿಕಾರ ನಡೆಯುವುದಿಲ್ಲ ಎಂಬ ಘೋಷಣೆ ಕೂಗಿದ್ದಾರೆ. ಮಹಿಳೆ ಸೇರಿ ಇತರ ಇಬ್ಬರು ಹೊರಗೆ ಘೋಷಣೆ ಕೂಗಿದ್ದಾರೆ. ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯಿಂದ ಆತಂಕಗೊಂಡ ಸಂಸದರು ಸದನದಿಂದ ಹೊರಗೆ ಓಡಿದರು. ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ವಿವಿಧ ಪಕ್ಷಗಳ ನಾಯಕರು ಆತಂಕ ವ್ಯಕ್ತಪಡಿಸಿದರು.
ಹಿಡಿದುಕೊಟ್ಟ ಮುನಿಸ್ವಾಮಿ : ಇಬ್ಬರು ದುಷ್ಕರ್ಮಿಗಳ ಪೈಕಿ ಒಬ್ಬನನ್ನು ಸೆರೆಹಿಡಿದು ಭದ್ರತಾ ಸಿಬ್ಬಂದಿಯ ಕೈಗೆ ಒಪ್ಪಿಸಿದ್ದು ಕೋಲಾರ ಸಂಸದ ಮುನಿಸ್ವಾಮಿ ಮತ್ತು ಇತರರು ಎಂದು ತಿಳಿದುಬಂದಿದೆ. ವೀಕ್ಷಕರ ಗ್ಯಾಲರಿಯಿಂದ ಜಿಗಿದ ಸಾಗರ್ ಶರ್ಮ ಮೇಜಿನಿಂದ ಮೇಜಿಗೆ ಹಾರುತ್ತಿದ್ದಂತೆ ಮುನಿಸ್ವಾಮಿ ಮತ್ತು ಇತರರು ಹಿಡಿದುಕೊಂಡರು. ಈ ಮಾಹಿತಿಯನ್ನು ಮುನಿಸ್ವಾಮಿ ಹಂಚಿಕೊಂಡಿದ್ದು ನಮ್ಮ ಜಾಗದಲ್ಲಿ ಕುಳಿತುಕೊಂಡಿದ್ದಾಗ ಒಬ್ಬ ಸುಮಾರು 10 ಮೀಟರ್ ಎತ್ತರದ ಪ್ರೇಕ್ಷಕರ ಗ್ಯಾಲರಿಯಿಂದ ಕೆಳಗೆ ಜಿಗಿದು ಮೇಜಿನಿಂದ ಹಾರಲು ಯತ್ನಿಸಿದಾಗ ಅವನನ್ನು ಹಿಡಿದು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದವು. ನಾವು ಹಿಡಿದ ಮೇಲೆ ಅವನು ತನ್ನ ಕಾಲಿನಲ್ಲಿ ಇದ್ದ ಕಲರ್ ಬಾಂಬ್ ಸ್ಪೋಟಿಸಿದ್ದಾನೆ ಎಂದು ಮುನಿಸ್ವಾಮಿ ತಿಳಿಸಿದ್ದಾರೆ.
ನಾನು ಸಹಾ ಹಿಡಿದೆ:
ಕಲಾಪದ ವೇಳೆ ಈ ಘಟನೆ ನಡೆದಾಗ ಅಲ್ಲೇ ಇದ್ದ ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಞಾ ಕೂಡ ಮಾತಮಾಡಿದ್ದಾರೆ. ಇಬ್ಬರು ವ್ಯಕ್ತಿಗಳನ್ನು ಹಿಡಿದ ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಞಾ, ಅವರ ಕೈಯಲ್ಲಿ ಹಳದಿ ಬಣ್ಣದ ಹೊಗೆ ಹೊರಸೂಸುವ ಏನೋ ಇತ್ತು. ನಾನು ಅದನ್ನು ಕಿತ್ತು ಹೊರಗೆ ಎಸೆದೆ ಎಂದಿದ್ದಾರೆ.
ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಘಟನೆ ಬಗ್ಗೆ ಪ್ರತಿಕ್ರಿಯಿಸಿ ವೀಕ್ಷಕರ ಪಾಸ್ ನೀಡುವಂತೆ ಬಹಳ ಒತ್ತಾಯ ಮಾಡಿ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.