ಬೆಳಗಾವಿ: ಗೋಕಾಕ ನಗರದ ಉಪ್ಪಾರಗಲ್ಲಿಯಲ್ಲಿ ದಶರಥ ಬಂಡಿ(80)ಎಂಬವರು ತಮ್ಮ ಮನೆಗೆ ಮಳೆ ನೀರು ನುಗ್ಗಿರುವ ವಿಷಯ ತಿಳಿದು ನಿಧನರಾಗಿದ್ದಾರೆ. ಶುಕ್ರವಾರ ಸಂಜೆ ಹೊತ್ತು ಮನೆಗೆ ಮಳೆ ನೀರು ಬಂದಿರುವ ವಿಷಯ ತಿಳಿದ ಅವರು ಹೃದಯಘಾತದಿಂದ ಮೃತಪಟ್ಟಿದ್ದಾರೆ. ದಶರಥ ಅವರ ಅಂತ್ಯಸಂಸ್ಕಾರ ಮುಗಿಸಿ ಮನೆಯವರು ತಮ್ಮ ಮನೆಗೆ ವಾಪಸಾಗುವಾಗ ಮನೆಯೂ ಮುಳುಗಿದೆ. ರಾತ್ರೋರಾತ್ರಿ ಕುಟುಂಬಸ್ಥರು ಮನೆ ಬಿಟ್ಟು ಹೊರಗೆ ಬಂದಿದ್ದಾರೆ. ಇದೀಗ ದಶರಥ ಬಂಡಿ ಅವರ ಕುಟುಂಬಸ್ಥರು, ಮಕ್ಕಳು, ನಾಯಿಗಳು ಜೊತೆಗೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ.
ಮನೆಗೆ ನೀರು ನುಗ್ಗಿದ ಸುದ್ದಿ ಕೇಳಿ ವ್ಯಕ್ತಿ ಹೃದಯಘಾತದಿಂದ ಸಾವು
