ಬೆಳಗಾವಿ :
26/03/2023 ರಂದು ಹಳೇ ಪಿಬಿ ರಸ್ತೆ , ಯಡಿಯೂರಪ್ಪ ಮಾರ್ಗದ ಮುಖಾಂತರ ಆಕ್ಟೋ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಎಪಿಎಂಸಿ ಹಾಗೂ ಪಿಐ ಶಹಾಪುರ ಠಾಣೆ ಹಾಗೂ ಅವರ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 1,23,933 / – ರೂಪಾಯಿ ಬೆಲೆಯ ವಿವಿಧ ಕಂಪನಿಯ ಅಕ್ರಮ ಮದ್ಯ ಮತ್ತು ಮಾರುತಿ ಆಲ್ಟ್ರೋ ವಾಹನ ಸಂಖ್ಯೆ , ಕೆಎ – 22 – ಪಿ -3038 ( ಅ.ಕಿ. 40,000 / – ) ನೇದ್ದನ್ನು ವಶಪಡಿಸಿಕೊಂಡಿರುತ್ತಾರೆ. ಈ ಅಕ್ರಮದಲ್ಲಿ ಭಾಗಿಯಾದ ಆರೋಪಿ ಅನೀಲಕುಮಾರ ಲವಪ್ಪ ಹಜ್ಜಿ ( 53 ) ಸಾ || ಹರಿಜನವಾಡಿ , ಯಕ್ಸಂಬಾ ತಾ || ಚಿಕ್ಕೋಡಿ ಹಾಲಿ, ಶಿವಾಜಿ ನಗರ , ಬೆಳಗಾವಿ ಈತನಿಗೆ ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರಿಸಲಾಗಿದೆ. ದಾಳಿಯಲ್ಲಿ ಪಾಲ್ಗೊಂಡ ಶಹಾಪುರ ಮತ್ತು ಎಪಿಎಂಸಿ ಠಾಣೆಯ ಪಿಐ ಹಾಗೂ ಸಿಬ್ಬಂದಿಯವರ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಉಪ ಆಯುಕ್ತರವರು ಶ್ಲಾಘಿಸಿರುತ್ತಾರೆ .