ಬೆಳಗಾವಿ:ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಹಿರಿಯ ಸಹಾಯಕ ಸಂಪಾದಕ ನೌಶಾದ್ ಬಿಜಾಪುರ ಅವರ ತಂದೆ, ನಿವೃತ್ತ ಖಜಾನೆ ಅಧಿಕಾರಿ, 83 ವರ್ಷದ ಅಬ್ದುಲ್ ಜಬ್ಬಾರ್ ಎಚ್. ಕಲಾದಗಿ ಶುಕ್ರವಾರ ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾದರು.
ವಿಜಯಪುರದ ಮೂಲದ ಕಲಾದಗಿ ಅವರು ತಮ್ಮ ವೃತ್ತಿಜೀವನದ ಬಹುಪಾಲು ಸಮಯವನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಖಜಾನೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ಬಾದಾಮಿ, ಹುಬ್ಬಳ್ಳಿ, ಧಾರವಾಡ ಮತ್ತು ಮುಂಡರಗಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡಿದ್ದಾರೆ.
ಅವರು ಪತ್ನಿ, ಮಗ, ಇಬ್ಬರು ಹೆಣ್ಣುಮಕ್ಕಳು, ಸೊಸೆ ಮತ್ತು ನಾಲ್ವರು ಮೊಮ್ಮಕ್ಕಳನ್ನು ಅಗಲಿದ್ದಾರೆ.